ಜಾತಿ ಗಣತಿ ಕುರಿತು ವೀರಶೈವ ಲಿಂಗಾಯತ ಮುಖಂಡರ ಮಹತ್ವದ ಸಭೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಜಾತಿಗಣತಿ -2025ರಲ್ಲಿ ವೀರಶೈವ -ಲಿಂಗಾಯತ ಸಚಿವರು-ಶಾಸಕರುಗಳ ಮಹತ್ವದ ಸಭೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆಯಿತು.

ವೀರಶೈವ-ಲಿಂಗಾಯತ ಸಚಿವರು ಮತ್ತು ಶಾಸಕರುಗಳ ಈ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಬಾರಿಯ ಜಾತಿ ಗಣತಿಯ ಸಂದರ್ಭದಲ್ಲಿ
, ಸಮುದಾಯದವರು ತಮ್ಮ ಜಾತಿ ಹಾಗೂ ಉಪಜಾತಿ ದಾಖಲಿಸುವ ಸಂಬಂಧಿತ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

- Advertisement - 

ಸಮುದಾಯದ ಸಚಿವರುಗಳು ಸೇರಿದಂತೆ, ಪಕ್ಷಾತೀತವಾಗಿ ವಿವಿಧ ಪಕ್ಷಗಳ ಶಾಸಕರು- ಮುಖಂಡರು, ಹಿರಿಯರು-ಚಿಂತಕರು ಉಪಸ್ಥಿತರಿದ್ದು, ತಮ್ಮ ಚಿಂತನೆಗಳನ್ನು ಹಂಚಿಕೊಂಡರು.

ಸಮುದಾಯದ ಏಕತೆ ಮತ್ತು ಪ್ರಗತಿಯ ಹಾದಿ ಬಲಪಡಿಸಲು ಈ ಸಭೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

- Advertisement - 

 

 

 

Share This Article
error: Content is protected !!
";