ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ದಾರ್‌ವಲ್ಲಭಭಾಯಿ ಪಟೇಲ್‌ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಟೇಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಪ್ರತಿಜ್ಞಾ ವಚನ ಬೋಧಿಸಿದರು.
ಗಾಂಧಿವಾದದ ನೆರಳಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು, ಸ್ವಾತಂತ್ರ್ಯ ನಂತರ ಅಖಂಡ ಭಾರತ ನಿರ್ಮಾಣದ ಸಂಕಲ್ಪತೊಟ್ಟು, ಆ ಹಾದಿಯಲ್ಲಿ ಎದುರಾದ ಎಲ್ಲ ಕಠಿಣ ಸವಾಲುಗಳನ್ನು ಮೆಟ್ಟಿನಿಂತು ಯಶಸ್ವಿಯಾದ ಉಕ್ಕಿನ ಮನುಷ್ಯ.
ಪಟೇಲರ ಉತ್ಕಟ ರಾಷ್ಟ್ರಪ್ರೇಮ, ರಾಜಕೀಯ ನೈಪುಣ್ಯತೆ, ಜಾತ್ಯತೀತ ಸಿದ್ಧಾಂತಗಳಲ್ಲಿಅವರಿಗಿದ್ದ ಬದ್ಧತೆಯನ್ನು ನೆನೆದು, ನಮಿಸೋಣ. ಈ ದಿನ ಅಖಂಡ ಭಾರತವನ್ನು ಸಮತೆಯ ಭಾರತವಾಗಿಸುವ ಶಪಥಗೈಯ್ಯೋಣ. ದೇಶವಾಸಿಗಳೆಲ್ಲರಿಗೂ ರಾಷ್ಟ್ರೀಯ ಏಕತಾ ದಿನದ ಶುಭಾಶಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

