ಪೋಸ್ಟ್ ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ !!!!

News Desk

ಚಂದ್ರವಳ್ಳಿ ನ್ಯೂಸ್, ಬಿಹಾರ :
ಸಾವನ್ನಪ್ಪಿದ್ದಾನೆಂದು ತಿಳಿದು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾದ ವೇಳೆಯೇ ಆ ವ್ಯಕ್ತಿ ನಾನು ಬದುಕಿದ್ದೇನೆಂದು ಹೇಳಿ ಎದ್ದು ಕುಳಿತ ಘಟನೆ ಬಿಹಾರದಲ್ಲಿ ನಡೆದಿದೆ .

ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಪೋಸ್ಟ್ಮಾರ್ಟಮ್ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್ ಮೇಲೆ ಹತ್ತಿ ನಿಂತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.

ರಾಕೇಶ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದಾಗ ನೆಲದ ಮೇಲೆ ಬಿದ್ದಿರುವುದು ಕಂಡಿತ್ತು, ದೇಹದ ಚಲನೆ ಇರಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು ಎಂದು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಬಯಾಸ್ ಪ್ರಸಾದ್ ಹೇಳಿದರು.

ಈ ಮಧ್ಯೆ ವೈದ್ಯರು ನಾಡಿ ಮಿಡಿತವನ್ನೂ ನೋಡದೆ ಆತ ಸತ್ತಿದ್ದಾನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ಆತ ಎಚ್ಚರಗೊಂಡಿದ್ದು ನಾನು ಬದುಕಿದ್ದೇನೆ ಎಂದು ತಿಳಿಸಿದ್ದಾನೆ. ಬಳಿಕ ಆ ವ್ಯಕ್ತಿಯನ್ನು ವಿಚಾರಣೆಗೆಂದು ಕರೆದೊಯ್ದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾತ್ ರೂಂ ಕ್ಲೀನ್ ಮಾಡಲು ಹೋದಾಗ ಈ ವ್ಯಕ್ತಿ ಕ್ಲೀನರ್ ಗೆ ಸಿಕ್ಕಿದ್ದರು, ನಾನು ಔಷಧಿ ಖರೀದಿಸಲು ಹೋಗಿದ್ದೆ, ಏನೂ ತಿಂದಿರಲಿಲ್ಲ ಹಾಗಾಗಿ ತಲೆತಿರುಗಿ ಬಿದ್ದಿದ್ದೆ ಎಂದು ರಾಕೇಶ್ ಹೇಳಿದ್ದಾರೆ.

ರಾಕೇಶ್ ಕುಮಾರ್ ಜೆರೋಯಿನ್ ಗ್ರಾಮದ ನಿವಾಸಿ. ಘಟನೆ ನಡೆದ ಬಳಿಕ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಸ್ಟ್ರೆಚರ್ನಲ್ಲಿ ಕುಳಿತು ನಾನು ಸತ್ತಿಲ್ಲಪ್ಪ ಬದುಕಿದ್ದೇನೆ ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.

- Advertisement -  - Advertisement - 
Share This Article
error: Content is protected !!
";