ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಡಾ.ರೆಬೆಲ್ ಸ್ಟಾರ್ ಅಂಬರೀಷ್ ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ. ಚಿತ್ರರಸಿಕರ ನೆಚ್ಚಿನ ಮಂಡ್ಯದ ಗಂಡಿನ ಜನ್ಮದಿನಾಚರಣೆಯ ಈ ದಿನದಂದು ಅವರ ವಿಚಾರಗಳನ್ನು ನೆನೆಯೋಣ.
ಅಂಬರೀಶ್ ಒಬ್ಬ ಪ್ರಬುದ್ಧತೆಯ ನಟ. ನಾಗರಹಾವು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ನಾಗರಹಾವು ಚಿತ್ರದ ಚಿತ್ರೀಕರಣ ಚಿತ್ರದುರ್ಗ ನಗರದಲ್ಲಿ ಸಂಪೂರ್ಣವಾಗಿ ಮಾಡಲಾಗಿದೆ.
ಈ ಚಿತ್ರದ ಯಶಸ್ಸು ದೇಶವ್ಯಾಪಿ ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಗಿತ್ತು. ನಾಗರಹಾವು ಚಿತ್ರವನ್ನು ದೇಶದ ಇತರೆ ಭಾಷೆಯಲ್ಲಿ ರಿಮೇಕ್ ಮಾಡಲಾಗಿದೆ. ಆ ಎಲ್ಲಾ ಭಾಷೆಗಳಲ್ಲಿ ಅಂಬರೀಷ್ ಜಲೀಲನ ಪಾತ್ರವನ್ನೇ ಮಾಡಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಅಂಬರೀಷ್ ಅವರ ಮಾತುಗಳು ಬಹಳಷ್ಟು ಒರಟು ಇದ್ದರು ಅವರ ವ್ಯಕ್ತಿತ್ವದ ಗುಣಗಳು ಇತರರಿಗೆ ಮಾರ್ಗದರ್ಶನ. ಮಂಡ್ಯ ಜಿಲ್ಲೆಯ ಜನತೆಗೆ ರಾಜಕಾರಣಿಯಾಗಿ ರಾಜ್ಯದ ಜನತೆಯ ಮನಸ್ಸಲ್ಲಿ ಕಲಿಯುಗದ ಕರ್ಣನಾಗಿ ಅಂಬರೀಷ್ ಅವರು ಎಂದೆಂದಿಗೂ ಜೀವಂತ ಎಂದು ರಘು ಗೌಡ ತಿಳಿಸಿದ್ದಾರೆ.