ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನೂ ಈ ಸರ್ಕಾರ ಸಣ್ಣಪುಟ್ಟ ಘಟನೆ ಎಂಬಂತೆ ಬಿಂಬಿಸುತ್ತಿರುವುದು ಆಘಾತಕಾರಿ ನಡೆ. ಯುವತಿಯರ ಮೇಲಿನ ದೌರ್ಜನ್ಯದ ಕುರಿತು ಮಾಧ್ಯಮಗಳೆದುರು ಸಣ್ಣ ವಿಚಾರ ಎಂದು ಕಾಂಗ್ರೆಸ್ ಶಾಸಕ ಹೇಳಿರುವುದು ಈ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ಆಡಳಿತದ ವಿರುದ್ಧ ಹರಿಹಾಯ್ದಿದೆ.
ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲಗೊಂಡ ಪರಿಣಾಮವಾಗಿ ಮಹಿಳೆಯರನ್ನು ಪೀಡಿಸುವ ಸುದ್ದಿಗಳು ದಿನನಿತ್ಯ ಸದ್ದು ಮಾಡುತ್ತಿವೆ. ಆಡಳಿತ ಪಕ್ಷದ ಸದಸ್ಯರು ಕ್ರೈಮ್ ಚಟುವಟಿಕೆಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ಕಾರಣ ಮಹಿಳೆಯರು, ಹೆಣ್ಣು ಮಕ್ಕಳು ನಿರ್ಭಯವಾಗಿ ರಸ್ತೆಯಲ್ಲಿ ಓಡಾಡಂತಾಗಿದೆ ಎಂದು ಬಿಜೆಪಿ ಆರೋಪಿಸಿದೆ.