3 ಕೋಟಿಯಲ್ಲಿ ಹಿಂದೂ ದೇವಸ್ಥಾನ ನಿರ್ಮಿಸಿಕೊಟ್ಟ ಮುಸ್ಲಿಂ ಮುಖಂಡ

News Desk

3 ಕೋಟಿಯಲ್ಲಿ ಹಿಂದೂ ದೇವಸ್ಥಾನ ನಿರ್ಮಿಸಿಕೊಟ್ಟ ಮುಸ್ಲಿಂ ಮುಖಂಡ
ಚಂದ್ರವಳ್ಳಿ ನ್ಯೂಸ್
, ರಾಮನಗರ:
ಧರ್ಮ-ಧರ್ಮಗಳ ನಡುವೆ ನಡೆಯುವ ಕಲಹಗಳ ನೋಡುತ್ತಿರುವ ಸಂದರ್ಭದಲ್ಲೇ ರಾಮನಗರ ಜಿಲ್ಲೆಯ ಬೊಂಬೆನಗರಿ ಚನ್ನಪಟ್ಟಣದಲ್ಲಿ ಮುಸ್ಲಿಂ ವ್ಯಕ್ತಿಯೊರ್ವ ಹಿಂದೂ ದೇವಸ್ಥಾನಕ್ಕೆ ಕೋಟ್ಯಂತರ ರೂ.ದೇಣಿಗೆ ನೀಡುವ ಮೂಲಕ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗುವಂತ ಪ್ರಸಂಗ ನಡೆದಿದೆ.

ಚನ್ನಪಟ್ಟಣದ ಮುಸ್ಲಿಂ ಉದ್ಯಮಿಯೊಬ್ಬರು ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಪುರಾತನ ದೇಗುಲದ ಪುನರ್​ ನಿರ್ಮಾಣಕ್ಕೆ ಬರೋಬ್ಬರಿ 3 ಕೋಟಿ ಹಣ ನೀಡಿದ್ದಲ್ಲದೆ ನೂತನ ದೇಗುಲದ ಉದ್ಘಾಟನೆ ಹಿನ್ನಲೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಮಾದರಿಯಾಗಿದ್ದಾರೆ. ಚನ್ನಪಟ್ಟಣದ ಮಂಗಳವಾರಪೇಟೆಯ ಬಸವೇಶ್ವರ ಸ್ವಾಮಿಯ ದೇಗುಲ ಸಂಪೂರ್ಣ ಶಿಥಿಲಗೊಂಡಿತ್ತು.

- Advertisement - 

ಹಾಗಾಗಿ ದೇಗುಲದ ನೂತನ ಕಟ್ಟಡವನ್ನ ತಮ್ಮದೇ ಸಂಪೂರ್ಣ ಖರ್ಚಿನಲ್ಲಿ ಚನ್ನಪಟ್ಟಣದ ಮುಸ್ಲಿಂ ಮುಖಂಡ, ಎಸ್. ಕೆ. ಬೀಡಿ ಮಾಲೀಕ ಸೈಯದ್ ಸದಾತ್ ವುಲ್ಲಾ ಸಖಾಫ್ ನಿರ್ಮಿಸಿಕೊಟ್ಟಿದ್ದಾರೆ. ಸೈಯದ್ ಸದಾತ್ ವುಲ್ಲಾ ಸಖಾಫ್ ಅವರನ್ನು ಹಿಂದೂ ಸಮಾಜ ಸನ್ಮಾನಿಸಿದ್ದು, ಬೆಳ್ಳಿ‌ ಕಿರೀಟ ತೊಡಿಸಿ, ಹೂವಿನ ಮಳೆ ಸುರಿದು ಗೌರವಿಸಿ ಜೈಕಾರ ಹಾಕಿದ್ದಾರೆ.

- Advertisement - 
Share This Article
error: Content is protected !!
";