ಹವಾನಿಯಂತ್ರಣ ರಹಿತ ಸೇವೆಯೊಂದಿಗೆ ಹೊಸ ಮೆಟ್ರೋ ಫೀಡರ್ ಮಾರ್ಗ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಯಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗವನ್ನು ಸೆಪ್ಟೆಂಬರ್ 23 ರಿಂದ ಪರಿಚಯಿಸಲಾಗುತ್ತಿದೆ.

ಮಾರ್ಗ ಸಂಖ್ಯೆ 18 ಬನಶಂಕರಿ ಬಸ್ ನಿಲ್ದಾಣದಿಂದ ಆರ್.ವಿ.ಮೆಟ್ರೋ ನಿಲ್ದಾಣ, ಜಯನಗರ ಮೆಟ್ರೋ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಕಾರ್ಮಲ್ ಕನ್ವೆಂಟ್, ಜಯನಗರ 9ನೇ ಬ್ಲಾಕ್ ಈಸ್ಟ್, ಬಿಳೇಕಹಳ್ಳಿ, ಹುಳಿಮಾವು ಗೇಟ್, ಗೊಟ್ಟಿಗೆರೆ, ಬಸವಂತಪುರ ಗೇಟ್, ಕೋಳಿಫಾರ್ಮ್ ಗೇಟ್‍ವರೆಗೆ 4 ಬಸ್ಸುಗಳು, 56 ಸುತ್ತುವಳಿಗಳಲ್ಲಿ ಸೇವೆಯನ್ನು ಒದಗಿಸಲಿವೆ.

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

- Advertisement -  - Advertisement - 
Share This Article
error: Content is protected !!
";