ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸ ಟಾಟಾ ಟಿಯಾಗೊ ಹೊಸ ಹೊರಭಾಗ, ಪರಿಷ್ಕೃತ ಒಳಾಂಗಣ ಮತ್ತು ಹೊಸ ನೋಟ ಮತ್ತು ವೈಶಿಷ್ಟ್ಯಗಳನ್ನು ಹೊಂದಿದ್ದು ಭಾರತೀಯರ ನೆಚ್ಚಿನ ಹ್ಯಾಚ್‌ಬ್ಯಾಕ್ ಹಲವಾರು ನವೀಕರಣಗಳನ್ನು ಪಡೆಯುತ್ತದೆ ಎಂದು ಉಪನ್ಯಾಸಕ ವಿಶ್ವನಾಥ್ ಅಭಿಪ್ರಾಯಪಟ್ಟರು.
ಇಲ್ಲಿನ ಮೆದೇಹಳ್ಳಿ ರಸ್ತೆಯ ಶ್ರೀಆಟೋ ಟಾಟಾ ಮೋಟರ್ಸ್ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಹೊಸ ಟಾಟಾ ಟಿಯಾಗೋ, ಟಿಗೋರ್, ಫೇಸ್ ಲಿಬ್ ಕಾರುಗಳನ್ನು ಅವರು ಬಿಡುಗಡೆ ಮಾಡಿ ಮಾತನಾಡಿದರು.
ಕೋಟೆನಾಡು ಚಿತ್ರದುರ್ಗದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲೇ ಶ್ರೀಆಟೋ ಟಾಟಾ ಮೋಟರ್ಸ್ ಮಾಲೀಕರು ಹೆಚ್ಚಿನ ವಹಿವಾಟು ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಾಲೀಕರು ಟಾಟಾ ಕಾರುಗಳ ಅಧಿಕೃತವಾಗಿ ಮಾರಾಟ ಮಾಡಿ ಗಮನ ಸೆಳೆದರೆ ಇನ್ನೂ ಟಾಟಾ ಕಾರುಗಳ ತಯಾರಿಕೆ ತುಂಬಾ ಗಟ್ಟಿಮುಟ್ಟಾಗಿದೆ. ಭದ್ರತೆಯಲ್ಲಿ ಫೈವ್ ಸ್ಟಾರ್ ರೇಟಿಂಗ್ ಹೊಂದಿರುವ ಟಾಟಾ ಕಾರುಗಳು ಕೋಟೆನಾಡಿನ ಜನತೆಯ ಅಚ್ಚುಮೆಚ್ಚಾಗಿದೆ ಎಂದು ಹೇಳಿದರು.
ಈಗ ಮಾರುಕಟ್ಟೆ ಬಂದಿರುವ ಹೊಸ Tiago.ev ಬೆಲೆ ರೂ. 7.99 ಲಕ್ಷ (ಎಕ್ಸ್-ಶೋರೂಂ), ಆದರೆ ಟಿಯಾಗೊ ಮತ್ತು ಟಿಗೋರ್ ಆರಂಭಿಕ ಬೆಲೆ ಕ್ರಮವಾಗಿ ರೂ. 4.99 ಲಕ್ಷ ಮತ್ತು ರೂ. 5.99 ಲಕ್ಷಗಳಾಗಿದ್ದು ಗ್ರಾಹಕರ ಕೈಗೆಟಗುವ ಬೆಲೆಯಲ್ಲಿ ಲಭ್ಯವಾಗಿವೆ ಎಂದು ಹೇಳಿದರು.
ಶ್ರೀಆಟೋ ಟಾಟಾ ಮೋಟರ್ಸ್ ಶಾಖಾಧಿಕಾರಿ ರಾಜಶೇಖರ್ ಇಟ್ಟಗಿ ಮಾತನಾಡಿ ಟಾಟಾ ಟಿಯಾಗೋ, ಟಿಗೋರ್ ಸೇರಿದಂತೆ ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಟಾಟಾ ಕಾರುಗಳ ಬಾಹ್ಯ ನವೀಕರಣಗಳು ಅದ್ಭುತವಾಗಿವೆ. ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಗ್ರಿಲ್ ಸೇರಿದಂತೆ ಬಾಹ್ಯ ನವೀಕರಣಗಳು ನವೀಕರಿಸಿದ ಮುಂಭಾಗದ ನೋಟ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲ ಟಿಯಾಗೊದ ಏರ್ ಡ್ಯಾಮ್ ಅನ್ನು ಇನ್ನಷ್ಟು ಬ್ಲಿಂಗ್ ಮಾಡಲು ಕ್ರೋಮ್ ಇನ್ಸರ್ಟ್‌ಗಳೊಂದಿಗೆ ಸಜ್ಜುಗೊಳಿಸಲಾಗಿದೆ. ಹೊಸ ಟಾಟಾ ಟಿಯಾಗೊ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ವೃತ್ತಾಕಾರದ ಫಾಗ್ ಲ್ಯಾಂಪ್‌ಗಳನ್ನು ಹೊಂದಿದೆ. ಹ್ಯಾಚ್‌ಬ್ಯಾಕ್ ಹೊಸ ಶಾರ್ಕ್ ಫಿನ್ ಆಂಟೆನಾವನ್ನು ಸಹ ಪಡೆಯುತ್ತದೆ ಎಂದು ಅವರು ವಿವರಿಸಿದರು.
ಹೊಸ ಟಾಟಾ ಟಿಯಾಗೊ 2025 ಆವೃತ್ತಿಯ ಒಳಗೆ, ಈ ಕಾರು ಹೊಸ ಸ್ಟೀರಿಂಗ್ ವೀಲ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಈ ಕಾರು ಹೊಸ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಟಿಪಿಎಂಗಳು ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಸಹ ಪಡೆಯುತ್ತದೆ. ಈ ಕಾರಿನ ಟಾಪ್ ಮಾಡೆಲ್ ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಬಟನ್‌ನೊಂದಿಗೆ ಕೀಲೆಸ್ ಎಂಟ್ರಿಯಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಟಾಪ್-ಸ್ಪೆಕ್ 360-ಡಿಗ್ರಿ ಕ್ಯಾಮೆರಾವನ್ನು ಸಹ ಒದಗಿಸುತ್ತದೆ ಎಂದು ಅವರು ತಿಳಿಸಿದರು.
ಶ್ರೀಆಟೋ ಟಾಟಾ ಮೋಟರ್ಸ್ ಮಾಲೀಕರಾದ ಎಂ.ವಿ.ವಿಶ್ವನಾಥ್ ಮಾತನಾಡಿ, ಗ್ರಾಹಕರು ನಮಗೆ ದೇವರುಗಳು. ಶ್ರೀಆಟೋ ಟಾಟಾ ಮೋಟರ್ಸ್ ಆರಂಭಿಸಿದ ದಿನದಿಂದಲೂ ನಮ್ಮೊಂದಿಗೆ ಗ್ರಾಹಕರಿದ್ದು ಅವರ ನಿರೀಕ್ಷೆಗಳನ್ನು ನಾವು ಪೂರೈಸುತ್ತಿದ್ದೇವೆ. ಅಷ್ಟೇ ಅಲ್ಲ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು ಮುಂದೆ ಸಾಗುತ್ತಿದ್ದೇವೆ ಎಂದು ವಿಶ್ವನಾಥ್ ಹೇಳಿದರು.
ಹೊಸದಾಗಿ ಬಿಡುಗಡೆಯಾಗಿರುವ ಟಾಟಾ ಟಿಯಾಗೊದ ಪವರ್‌ಟ್ರೇನ್ ಗುಣಲಕ್ಷಣಗಳು ಹಿಂದಿನ ಮಾದರಿಯಂತೆಯೇ ಇವೆ. ಅದೇ 1.2-ಲೀಟರ್, ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಈ ICE ರೂಪಾಂತರಕ್ಕೆ ಶಕ್ತಿ ನೀಡುತ್ತದೆ. ಇದು AMT ಅಥವಾ ಐದು-ವೇಗದ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗೆ ಸಂಪರ್ಕ ಹೊಂದಿದೆ. ಹೆಚ್ಚುವರಿಯಾಗಿ, ಗ್ರಾಹಕರು CNG ಬಳಸುವ ಆಯ್ಕೆ ಮಾಡುತ್ತಿರುವುದು ಖುಷಿ ತಂದಿದೆ ಎಂದು ಮಾಲೀಕ ವಿಶ್ವನಾಥ್ ತಿಳಿಸಿದರು.
ಟಾಟಾ ಟಿಯಾಗೊ ಕಾರಿನ ಕಾರ್ಯಕ್ಷಮತೆ ಮತ್ತು ಬೆಲೆಯಿಂದಾಗಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತಕ್ಷಣವೇ ಜನಪ್ರಿಯವಾಗಿದೆ. ಈ ಕಾರು ಹೊಂದಿರುವ ಎಲ್ಲಾ ವೈಶಿಷ್ಟ್ಯಗಳೊಂದಿಗೆ, ದೈತ್ಯ ಕಾರು ತಯಾರಕರು ಮತ್ತೊಮ್ಮೆ 2025 ಟಿಯಾಗೊವನ್ನು ತಕ್ಷಣದ ಯಶಸ್ಸನ್ನು ಗಳಿಸುವ ಗುರಿಯನ್ನು ಹೊಂದಿದ್ದಾರೆ ಮತ್ತು ಕಿರಿಯ ಮಾರುಕಟ್ಟೆಯನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಕಿರಣ್ ಕುಮಾರ್, ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಶ್ರೀನಿವಾಸ್, ಅಡುಗೆ ಅನಿಲ ವಿತರಕ ಲೋಹಿತ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.