ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವೀರಶೈವ ಲಿಂಗಾಯತ ಜನಾಂಗದ ವಿರೋಧಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರನ್ನು ಲಿಂಗಾಯತ ಯುವ ಪಡೆ ಆಗ್ರಹಿಸಿದ್ದರು.
ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ವೃತದ ಬಳಿ ಪ್ರತಿಭಟನೆ ನಡೆಸಿದ ಲಿಂಗಾಯತ ಯುವ ಪಡೆಯ ಪದಾಧಿಕಾರಿಗಳು ಪಂಚಮಸಾಲಿ ಸಮಾಜದ ಬಂಧುಗಳು ಪ್ರವರ್ಗ-೨ಎ ಮೀಸಲಾತಿಗಾಗಿ ಶಾಂತಿಯುತವಾಗಿ ಬೇಡಿಕೆ ಈಡೇರಿಕೆಗಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ
ಮನವಿ ಸಲ್ಲಿಸಲು ಆಗಮಿಸಿದಾಗ ಅದರಲ್ಲೂ ನ್ಯಾಯಾಲಯದ ಆದೇಶದ ಅನುಮತಿ ಪಡೆದಿದ್ದರೂ ಸಹ ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸ್ ಇಲಾಖೆ ಬಳಸಿಕೊಂಡು ಪ್ರತಿಭಟನೆ ನಿರಂತರ ಮೇಲೆ ಲಾಠಿಚಾರ್ಜ್ ಮಾಡಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ.
ನೂರಾರು ಜನ ಹೋರಾಟಗಾರರಿಗೆ ಮರಣಾಂತಿಕ ಹಲ್ಲೆಯಾಗಿದೆ ಕೈ ಕಾಲುಗಳು ಮುರಿದಿವೆ. ಜೊತೆಗೆ ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲಿಸಿ ಬಂಧನ ಮಾಡಿರುತ್ತಾರೆ ಎಂದು ದೂರಿದ್ದಾರೆ.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯುತ ಜನಾಂಗದ ಮೇಲೆ ಪದೇ ಪದೇ ದೌರ್ಜನ್ಯ ಎಸಗುತ್ತಿದೆ. ಈ ಹಿಂದೆ ನಮ್ಮ ಸಮಾಜವನ್ನು ಹೊಡೆಯಲು ಪ್ರತ್ಯೇಕ ಲಿಂಗಾಯುತ ಧರ್ಮದ ಹೋರಾಟವನ್ನು ಅಧಿಕಾರ ದಹಕ್ಕಾಗಿ ಬಳಸಿಕೊಂಡಿರುವುದು ದುರಂತ.
ವೀರಶೈವ ಲಿಂಗಾಯುತ ಪಂಚಮ ಸಾಲಿ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಮತ್ತು ಮುಖಂಡ ಮೇಲೆ ದೌರ್ಜನ್ಯ ಮಾಡಿರುವ ಸಂವಿಧಾನ ವಿರೋಧಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಈ ಕೂಡಲೆ ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿತೇಂದ್ರ ಹುಲಿಕುಂಟೆ, ಪಿ.ರುದ್ರೇಶ್ ವಿ.ಹೆಚ್.ಪಿ, ತಿಪ್ಪೇಶ್ ಗಾರೇಹಟ್ಟಿ, ಮಂಜುನಾಥ್, ವೀರೇಶ್, ಸಂಜಯ್ ಜಾಲಿಕಟ್ಟೆ, ಗುರುರಾಜ್, ಅಭಿಲಾಶ್, ದೀಲಿಪ್, ಮಲ್ಲಿಕಾರ್ಜುನ್ ಇತರರು ಉಪಸ್ಥಿತರಿದ್ದರು.