ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ವಾಸಿಸುತ್ತಿರುವ ಒಕ್ಕಲಿಗ ಕುಲಭಾಂದವರು ಕೃಷಿ ಕಾಯಕ ಸೇರಿದಂತೆ ಇನ್ನಿತರ ವ್ಯಾಪಾರ ನೀತಿಯಲ್ಲಿ ತೊಡಗಿಕೊಳ್ಳುವ ಮನಸ್ಥಿತಿ ಹೊಂದಿರುವವರು ಸೇರಿದಂತೆ ಮನೆ ಕಟ್ಟಲು ಮುಂದಾಗಿರುವರಿಗೆ ಹಾಗೂ ಆಸ್ತಿ ಕೊಳ್ಳುವವರಿಗೆ ಹಣಕಾಸಿನ ಸಾಲಸೌಲಭ್ಯ ಪಡೆಯಲು ಬ್ಯಾಂಕಿಂಗ್ ವ್ಯವಸ್ಥೆಗೆ ಮುಂದಾಗಿದ್ದವರಿಗೆ
ಸಲಹೆ ಸಹಾಯ ಹಸ್ತ ಚಾಚಲ್ಲಿದ್ದಾರೆ. ಇದರೊಂದಿಗೆ ಸರ್ಕಾರದ ವ್ಯವಸ್ಥೆಯಲ್ಲಿ ಇನ್ನಿತರೆ ಪರವಾನಗಿ ಪಡೆಯಲು ಕಷ್ಟವಾಗಿದ ಸಂದರ್ಭದಲ್ಲಿ ಈ ಎಲ್ಲಾ ವಿಚಾರವನ್ನು ನಿವಾರಿಸುವ ಸಹಾಯಕ್ಕಾಗಿ ಒಕ್ಕಲಿಗರ ವೇದಿಕೆ ಮುಂದಾಗಿದೆ.
2025 ಜನವರಿ ತಿಂಗಳ 3, 4, 5 ನೇ ತಾರೀಖು ಒಕ್ಕಲಿಗರ ಮಹಾ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 4 ರಲ್ಲಿ ಈ ಉಪಯುಕ್ತ ಕಾರ್ಯಕ್ರಮವಿದೆ. ಸ್ಟಾಲ್ ನಂಬರ್ 75ಕ್ಕೆ ಈ ವಿಚಾರದಲ್ಲಿ ಭೇಟಿ ನೀಡಬಹುದು. ಸರ್ವಜನಾಂಗದೊಂದಿಗೆ ಕೂಡಿ ಬದುಕುವುದೇ ಒಕ್ಕಲುತನ ಎಂದು ರಘು ಗೌಡ ತಿಳಿಸಿದ್ದಾರೆ.