ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕಾರಣಿ
ಲೆಕ್ಕದಲ್ಲಿ ಕೊಂಡಿ ಕಳಚಿ
ಎಂಬತ್ತರ ಮೇಲಾದರೂ
ಮತದಾನ ಆಯ್ಕೆಯಲಿ
ನಾ ಮುಖವಾಡದವನೇ
ಪ್ರಜಾ ವ್ಯವಸ್ಥೆ ಸಂಚುಗಾರ
ಹೀಗಂದದ್ದಕ್ಕೆ ಕ್ಷಮೆ ಇರಲಿ
ಖಂಡಿತಾ
ಗಾಯ ರಕ್ತ ಕಲೆಗಳಿಲ್ಲ
ಅಯುಧ ಬಳಸಿಲ್ಲ
ಗುರುತೇ ಸಿಗದ ಸಂಚುಗಳವು
ಮಹಜರಿಲ್ಲ ದಫನ್ ಆದಂತವು
ಘಟನೆಗೂ ಮುನ್ನ
ಜನ ಜಾತ್ರೆ ಮತ ಜಾತಿ ಪರಿಶೆ
ಉತ್ಸವದಬ್ಬರದಿ ಊಟಗಳು
ಮತ್ತೇರುವ ಪಾನಿಯಗಳು
ಐದು ವರ್ಷ ಗಾಯವ ಮರೆತ ಜನಕೆ
ಸ್ವರ್ಗವಿನ್ನೇನು ಮೂರೇ ಗೇಣು
ಕುರಿಗಳು ನಾವು ಕುರಿಗಳು
ಅಂದದ್ದಕ್ಕೇ ನಾನು ಕೊಂದದ್ದು
ಬಳಸಿ ಬತ್ತಳಿಕೆಯ ಪುರಾವೆಗಳು
ಈ ಸಮಾಜದಲ್ಲಿಯೇ ಇವೆ
ಮುಂದೆಯೂ ಬರುತ್ತಿರುತ್ತೇನೆ
ನಿಮ್ಮ ಹಕ್ಕನ್ನು ಕಸಿಯುತ್ತಿರುತ್ತೇನೆ
ಪ್ರಜಾ ಪ್ರಭುತ್ವದ ಮೇಲಾಣೆ
ಮಾರಿಕೊಳ್ಳುವವರು ಇರುವ ತನಕ
ಕುರಿಗಳಂತೆ ಬಳಸಿ ನಡೆಸುವ
ಚುನಾವಣೆಗಳಲ್ಲೆಲ್ಲಾ
ನಾ ಸಂಚುಗಾರ ಮೋಸಗಾರ

ನನಗೆ ಬರುವ ಮಹಾ ಶಿಕ್ಷೆ
ಪ್ರಜಾ ದೊರೆಯ ಅಧಿಕಾರ
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.

