ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಂಗಯ್ಯನಬಾಗಿಲು ಹತ್ತಿರವಿರುವ ತಿಪ್ಪಿನಘಟ್ಟಮ್ಮ ದೇವಸ್ಥಾನ ಸಮೀಪ ಟ್ರಾನ್ಸ್‌ಫಾರ್ಮರ್ ಮಕ್ಕಳ ಕೈಗೆಟುಕುವಂತಿರುವುದರಿಂದ ಅನಾಹುತ ಸಂಭವಿಸುವ ಮೊದಲೆ ಬೇರೆ ಕಡೆ ಸ್ಥಳಾಂತರಿಸುವಂತೆ ಅಲ್ಲಿನ ನಿವಾಸಿಗಳು ವಿದ್ಯುತ್ ಇಲಾಖೆಗೆ ಮನವಿ ಮಾಡಿದ್ದಾರೆ.
ಟ್ರಾನ್ಸ್‌ಫಾರ್ಮರ್ ಅಳವಡಿಸಿದ ಮೇಲೆ ಯಾವುದೇ ಅಪಾಯಗಳಾಗದಂತೆ ಸುತ್ತ ತಂತಿ ಬೇಲಿಯನ್ನು ಅಳವಡಿಸಬೇಕು. ಇದ್ಯಾವುದರ ಬಗ್ಗೆ ಬೆಸ್ಕಾಂನವರಿಗೆ ಪರಿವೆಯಿಲ್ಲದಂತಾಗಿದೆ. ದಿನವಿಡಿ ಮಕ್ಕಳು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿ ಆಟವಾಡುತ್ತಿರುತ್ತಾರೆ.
ಆಕಸ್ಮಿಕವಾಗಿ ವಿದ್ಯುತ್ ತಗುಲಿದರೆ ಪ್ರಾಣ ಹಾನಿಯಾಗುವ ಸಾಧ್ಯತೆಗಳಿರುವುದನ್ನು ಮನಗಂಡು ಐದಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಇನ್ನಾದರೂ ವಿದ್ಯುತ್ ಇಲಾಖೆಯವರು ಎಚ್ಚೆತ್ತುಕೊಂಡು ಟ್ರಾನ್ಸ್‌ಫಾರ್ಮರನ್ನು ಬೇರೆ ಕಡೆ ಶಿಫ್ಟ್ ಮಾಡುವಂತೆ ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥಗೊಪ್ಪೆ ಹಾಗೂ ಜಿಮ್ಮಿ ಇವರುಗಳು ಬೆಸ್ಕಾಂಗೆ ಒತ್ತಾಯಿಸಿದ್ದಾರೆ.

