ಭಾರೀ ಮಳೆ, ಕೋಡಿ ರಸ್ತೆಯಲ್ಲಿ ಸಿಲುಕಿದ ಖಾಸಗಿ ಬಸ್: ಜನರ ಪರದಾಟ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಕಳೆದ ೧೫ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಕೆರೆಗಳಲ್ಲಿ ಸಮೃದ್ದವಾದ ನೀರು ದಾಸ್ತಾನಾಗಿದೆ. ಇನ್ನೂ ಕೆಲವು ಗ್ರಾಮಗಳ ಕೆರೆಗಳು ಕೋಡಿಬಿದ್ದಿದ್ದು, ರಸ್ತೆಸಂಚಾರಕ್ಕೆ ಅಡಚಣೆ ಉಂಟಾಗಿದೆ.

ತಾಲ್ಲೂಕಿನ ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಮಧುರೆ ಕೆರೆಯ ಕೋಡಿನೀರು  ಮುಖ್ಯ ರಸ್ತೆ ಮೇಲೆ ಹರಿಯುತ್ತಿದ್ದು, ಶುಕ್ರವಾರ ಸೊಂಡೆಕೆರೆಯಿಂದ ಚಳ್ಳಕೆರೆಗೆ ಬರುತ್ತಿದ್ದ ಖಾಸಗಿ ಬಸ್ ರಸ್ತೆದಾಟುವ ಸಂದರ್ಭದಲ್ಲಿ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡಿದೆ. ಕೂಡಲೇ ಬಸ್‌ನಲ್ಲಿದ್ದ ಎಲ್ಲಾ ಜನರು ಕೆಳಗೆ ಇಳಿದಿದ್ದು ನಂತರ ಜೆಸಿಬಿ ಸಹಾಯದಿಂದ ಬಸನ್ನು ಮೇಲೆತ್ತಿ ಕಳಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ರಸ್ತೆಯಲ್ಲಿ ನಿಂತ ನೀರು ಸಾರ್ವಜನಿಕರು ಹಾಗೂ ವಾಹನಗಳ ಓಡಾಟಕ್ಕೆ ತೊಂದರೆ ಉಂಟು ಮಾಡಿತ್ತು. ಆದರೂ ಸಹ ಜನ ತಮ್ಮ ಕೆಲಸ ಕಾರ್ಯಗಳಿಗಾಗಿ ಈ ರಸ್ತೆಯನ್ನು ಹೆಚ್ಚು ಅಲಂಬಿಸಿದ್ದಾರೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳ ಸಂಚಾರ ಮಾಮೂಲಾಗಿದೆ.

ಇಂತಹ ಸಂದರ್ಭದಲ್ಲಿ ಹಳ್ಳದ ಮಧ್ಯದಲ್ಲೇ ಖಾಸಗಿ ಬಸ್ ಸಿಕ್ಕಿಹಾಕಿಕೊಂಡಿದ್ದರಿಂದ ಜನರು ಗಾಬರಿಗೊಂಡರು. ನಂತರ ಜೆಸಿಬಿ ಸಹಾಯದಿಂದ ಬಸ್‌ನ್ನು ಮೇಲೆತ್ತಲಾಯಿತು. ಸುಮಾರು ಒಂದುಗಂಟೆಗೂ ಹೆಚ್ಚುಕಾಲ ಕಾರ್ಯಸಿಕ್ಕಿಹಾಕಿಕೊಂಡು ಜನರು ಪರದಾಡಿದರು.

 

 

- Advertisement -  - Advertisement - 
Share This Article
error: Content is protected !!
";