ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಯಾವುದೇ ರೀತಿಯ ವಿಪತ್ತು ಸಂಭವಿಸಿದ ಸಂದರ್ಭದಲ್ಲಿ ಶೀಘ್ರವಾಗಿ ಸ್ಪಂದಿಸಬೇಕು ಎಂದು ರಾಜ್ಯ ಮೈ ಭಾರತ್ನ ಜಂಟಿ ನಿರ್ದೇಶಕ ಅಶೋಕ್ ಕುಮಾರ್ ದೇಸಾಯಿ ತಿಳಿಸಿದರು.
ನಗರದ ಡಾ. ಅನಿಬೆಸೆಂಟ್ ಪಾರ್ಕ್ ನಲ್ಲಿ ಸ್ಕೌಟ್ ಮತ್ತು ಗೈಡ್ಸ್, ರಾಷ್ಟಿಯ ವಿಪತ್ತು ನಿರ್ವಹಣಾ ಸಂಸ್ಥೆ, ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆಯ ವತಿಯಿಂದ ಶುಕ್ರವಾರ ನಡೆದ ಯುವ ಆಪದ್ ಮಿತ್ರ ನಿರ್ವಹಣೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ೭ ದಿನಗಳ ವಿಶೇಷ ಯುವ ಆಪದ್ ಮಿತ್ರ ಯೋಜನೆಯ ತರಬೇತಿ ಶಿಬಿರವಾಗಿದೆ. ಯುವ ಜನತೆಗೆ ತರಬೇತಿ ನೀಡಲಾಗುತ್ತಿದ್ದು, ವಿಪತ್ತಿನ ಸಂದರ್ಭದಲ್ಲಿ ಅಗತ್ಯ ಸಮಯದಲ್ಲಿ ಸ್ಪಂದಿಸುವ ಶಕ್ತಿ ಇರುತ್ತದೆ. ನೈಸರ್ಗಿಕ ವಿಪತ್ತು ತಡೆಯಲು ಸಾಧ್ಯವಿಲ್ಲ.
ಮನುಷ್ಯನ ನಾನಾ ಚಟುವಟಿಕೆಗಳಿಂದ ಪ್ರಕೃತಿ ಮೇಲೆ ನಡೆಯುವ ದೌರ್ಜನ್ಯದಿಂದ ಹಾನಿಯಾಗುತ್ತದೆ. ವಿವಿಧ ರೀತಿಯ ವಿಪತ್ತು ಸಂಭವಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಅಗತ್ಯವಾಗಿರುತ್ತದೆ. ಎನ್ಎಸ್ಎಸ್, ಎನ್ಸಿಸಿ ಸೇರಿದಂತೆ ಸಾಕಷ್ಟು ವಿಭಾಗಗಳು ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಕಾರ್ಯಕವೇ ಕೈಲಾಸ ನಮ್ಮ ಗುರುತು ಎಂದರು.
ಸ್ಕೌಟ್ಸ್ ಅಂಡ್ ಗೈಡ್ ಸಂಯೋಜಕ ನಾಗರಾಜು ಮಾತನಾಡಿ ಯುವ ಸಮೂಹಕ್ಕೆ ವಿಕೋಪದ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಯಾವ ಸಮಯದಲ್ಲಿ ,ಏನುಬೇಕಾದರೂ ಆಗಬಹುದು ಅದನ್ನು ವಿಪತ್ತು ಎನ್ನಬಹುದು. ವಿಪತ್ತು ಸಂಭವಿಸುವ ಬಗ್ಗೆ ಊಹೆ ಮಾಡಲು ಕಷ್ಟ ಆದರೂ ಕೆಲ ವಿಪತ್ತುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲಿ ತರಬೇತಿ ಪಡೆದವರು ಯಾವುದೇ ಫಲಾಫೇಕ್ಷೆ ಇಲ್ಲದೆ ಕಷ್ಟದಲ್ಲಿರುವ ಸಹಾಯಕ್ಕೆ ಧಾವಿಸಿದರೆ ತರಬೇತಿ ಪಡೆದಿದ್ದಕ್ಕೆ ಸಾರ್ಥಕತೆ ಬರುತ್ತದೆ ಎಂದು ಹೇಳಿದರು.
ಈ ಸಂದರ್ಭ ಜವಹಾರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಪಳನೀವೇಲು, ಸ್ಕೌಟ್ ಗೈಡ್ಸ್ ನ ಸಂಯೋಜಕರಾದ ಎಂ. ಎ. ಚಲ್ಲಯ್ಯ, ನಾಗರಾಜು, ಲತಾ, ಮೈ ಭಾರತ ಸಹಾಯಕ ಯೋಜನಾ ನಿರ್ದೇಶಕಿ ಜಮೀನಾ, ಮೋಹನ್, ಗ್ಲೋಬಲ್ ಕಾಲೇಜ್ ಎನ್ಸಿಸಿ ಅಧಿಕಾರಿ ಅಭಿಷೇಕ್, ಎನ್ಎಸ್ಎಸ್ ಅಧಿಕಾರಿ ನವೀನ್ ಸೇರಿದಂತೆ ಅನೇಕರು ಹಾಜರಿದ್ದರು.

