ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ನಾಯಕರು ಭ್ರಷ್ಟಾಚಾರದಲ್ಲಷ್ಟೇ ಅಲ್ಲ, ಸರ್ಕಾರಿ ಜಮೀನು ಕಬಳಿಸುವುದರಲ್ಲೂ ಎತ್ತಿದ “ಕೈ” ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ. ಸರ್ಕಾರದ ಆಸ್ತಿಗೆ ಕನ್ನ ಹಾಕುವುದರಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ನಾ ಮುಂದು, ತಾ ಮುಂದೆ ಅಂತ ಪೈಪೋಟಿ ನೀಡುತ್ತಿದ್ದಾರೆ.
ಈಗ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 10 ಎಕರೆ ಸರ್ಕಾರಿ ಗೋಮಾಳದ ಜಾಗವನ್ನು ಪೋಡಿ, ನಕ್ಷೆಯಾಗದೆ ಅಕ್ರಮವಾಗಿ ತಮ್ಮ ಬೆಂಬಲಿಗರಿಗೆ ಪರಭಾರೆ ಮಾಡಿಕೊಟ್ಟಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ದಾಖಲೆಗಳ ಸಮೇತ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಸಾಮಾಜಿಕ ಕಾರ್ಯಕರ್ತರೊಬ್ಬರು ಭೂಗಳ್ಳತನಕ್ಕೆ ಸಹಕರಿಸಿರುವ ಕೃಷ್ಣಭೈರೇಗೌಡ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.