ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಅವಶ್ಯ

News Desk
- Advertisement -  - Advertisement -  - Advertisement - 

ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಅವಶ್ಯ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
:
ಚಿತ್ರದುರ್ಗ ನಗರದ ಅಲ್ಪಸಂಖ್ಯಾತರ ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬಾಡಿಗೆ ಕಟ್ಟಡ ಬೇಕಾಗಿದೆ.

ತಾಲ್ಲೂಕು ವಿಸ್ತರಣಾಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಚಿತ್ರದುರ್ಗ ಉಪವಿಭಾಗ ಕಚೇರಿಯ ಅಧೀನದಲ್ಲಿ ಹೊಸದಾಗಿ ಮಂಜೂರಾಗಿ ಕಾರ್ಯನಿರ್ವಹಿಸುತ್ತಿರುವ 100 ಸಂಖ್ಯಾಬಲದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಅಡುಗೆ ಮನೆ, ಊಟದ ಕೋಣೆ, ಪ್ರತ್ಯೇಕ ವಾಸದ ಕೊಠಡಿಗಳು,

- Advertisement - 

ಬೋರ್‍ವೆಲ್ ನೀರು ಹಾಗೂ ಅಗತ್ಯ ಶೌಚಾಲಯಗಳು ಮತ್ತು ಸ್ನಾನದ ಗೃಹಗಳನ್ನೊಳಗೊಂಡಿರುವ ಸೂಕ್ತವಾದ ಕಟ್ಟಡದ ಅವಶ್ಯಕತೆ ಇದ್ದು, ಆಸಕ್ತ ಕಟ್ಟಡದ ಮಾಲೀಕರು ಕಟ್ಟಡವನ್ನು ಬಾಡಿಗೆ ನೀಡಲು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಶ್ರೀ ಆಂಜನೇಯ ನಿಲಯ, ಸರಸ್ವತಿಪುರಂ, 1ನೇ ಮುಖ್ಯರಸ್ತೆ, ಚಿತ್ರದುರ್ಗ, ದೂರವಾಣಿ ಸಂಖ್ಯೆ 9164167164 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- Advertisement - 

 

Share This Article
error: Content is protected !!
";