ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ
ಕನ್ನಡ ಮಣ್ಣಿನ, ನೆಲ ಮೂಲದ ಬದುಕನ್ನು ಹಾಗೂ ಶೋಷಿತ ತಳವರ್ಗಗಳ ಭಾವನೆಗಳನ್ನು ಬಿಂಬಿಸುವ ಚಲನ ಚಿತ್ರಗಳ ನಿರ್ಮಾಣ ಕನ್ನಡ ಚಿತ್ರರಂಗದಲ್ಲಿ ಅತಿ ವಿರಳ.
ನೆರೆಯ ತಮಿಳು, ತೆಲುಗು, ಮಳೆಯಾಳಂ ಚಿತ್ರರಂಗದಲ್ಲಿ ಇಂತಹ ನೆಲಮೂಲದ ಚಿತ್ರಗಳು ಹೆಚ್ಚಾಗಿ ನಿರ್ಮಾಣ ಗೊಂಡು ಯಶಸ್ವಿಯಾಗಿರುವ ಉದಾಹರಣೆ ಗಳು ಕಣ್ಮುಂದಿವೆ. ಅಪರೂಪಕ್ಕೆ ಎಂಬಂತೆ ದುನಿಯಾ ವಿಜಯ್ ನಾಯಕನಾಗಿ ನಟಿಸಿರುವ ಲ್ಯಾಂಡ್ ಲಾರ್ಡ್ ಚಿತ್ರ ತೆರೆಗೆ ಬಂದಿದೆ.
ಈ ಚಿತ್ರದಲ್ಲಿ ಸಮಗ್ರವಾಗಿ ಕರ್ನಾಟಕದ ಕನ್ನಡ, ದಲಿತ,ರೈತ,ಕೂಲಿ ಕಾರ್ಮಿಕ, ಪ್ರಗತಿಪರ ಚಿಂತನೆ,ಬಡ ವಿದ್ಯಾರ್ಥಿಗಳ, ಮಹಿಳೆಯರ ಮತ್ತು ಶೋಷಿತ ಸಮುದಾಯಗಳ ಚಿಂತನೆ ನಮ್ಮ ಸಂವಿಧಾನದ ಮತ್ತು ಸಮಾನತೆಯ ವಿಚಾರಗಳು ಸಮರ್ಥವಾಗಿ ಬಿಂಬಿತವಾಗಿರುವುದರಿಂದ ಕನ್ನಡ ನಾಡಿನ ಚಲನ ಚಿತ್ರ ಪ್ರೇಮಿಗಳು, ಮಹಿಳೆಯರು, ಯುವ ಸಮೂಹ ಈ ಚಿತ್ರವನ್ನು ಚಿತ್ರ ಮಂದಿರದಲ್ಲಿ ವೀಕ್ಷಿಸಿ ಚಿತ್ರವನ್ನು ಬೆಂಬಲಿಸಬೇಕೆಂದು ತಾಲೂಕಿನ ಪ್ರಗತಿಪರ ಚಿಂತಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

