ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈತರ ಕೃಷಿ ಪಂಪ್‘ಸೆಟ್‘ಗಳಿಗೆ ಟ್ರಾನ್ಸ್‘ಫಾರ್ಮರ್ ಸಮೇತ ಉಚಿತವಾಗಿ ಮೂಲಸೌಕರ್ಯ ಕಲ್ಪಿಸುತ್ತಿದ್ದ ಬಡ ರೈತರಿಗೆ ಆಸರೆಯಾಗಿದ್ದ ಯು.ಎನ್.ಐ.ಪಿ ಶೀಘ್ರ ವಿದ್ಯುತ್ ಯೋಜನೆಗಳನ್ನು ಕೈಬಿಡುವ ಮೂಲಕ ಕಾಂಗ್ರೆಸ್ ಸರ್ಕಾರ ಎಂದಿನಂತೆ ತನ್ನ ರೈತ ವಿರೋಧಿ ನಿಲುವನ್ನು ಮುಂದುವರೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಸದ್ಯ ರಾಜ್ಯ ಸರ್ಕಾರದ ಯಾವ ನಿಗಮಗಳ ಮೂಲಕವೂ ಬಡ ರೈತರಿಗೆ ಆಸರೆಯಾಗಿದ್ದ ಗಂಗಾ ಕಲ್ಯಾಣ ಯೋಜನೆಗೆ ಅನುದಾನ ಒದಗಿಸಿ ಅರ್ಹ ರೈತರಿಗೆ ಯೋಜಗೆ ಒದಗಿಸುವಲ್ಲಿಯೂ ವಿಫಲವಾಗಿದ್ದು, ಬಡ ರೈತರು ತಮ್ಮ ಹೊಲದಲ್ಲಿ ಕೊಳವೆಬಾವಿ ಕೊರೆಸಿದರೆ ಟ್ರಾನ್ಸ್ ಫಾರ್ಮರ್ ಅಳವಡಿಕೆಗೆ 3 ರಿಂದ 5 ಲಕ್ಷಗಳ ವರೆಗೆ ಹಣ ಹೊಂದಿಸುವ ಕ್ಲಿಷ್ಟಕರ ಪರಿಸ್ಥಿತಿಗೆ ತಂದು ನಿಲ್ಲಿಸಿರುವುದು ದೌರ್ಭಾಗ್ಯವೇ ಸರಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿಕಾರಿದ್ದಾರೆ.