ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬರಗಾಲಕ್ಕೆ ರೈತರ ನಿರಂತರ ಆತ್ಮಹತ್ಯೆ, ಕಲುಷಿತ ನೀರು ಕುಡಿದು ಅಮಾಯಕರ ಸಾವು, ಭ್ರಷ್ಟಾಚಾರಕ್ಕೆ ಬೇಸತ್ತು ಅಧಿಕಾರಿಗಳ ಆತ್ಮಹತ್ಯೆ, ಸರ್ಕಾರದ ನಿರ್ಲಕ್ಷ್ಯಕ್ಕೆ ಬಾಣಂತಿಯರ ಸರಣಿ ಸಾವು ಇದೀಗ ಮೈಕ್ರೊ ಫೈನಾನ್ಸ್‌ಕಿರುಕುಳಕ್ಕೆ ನೊಂದು ಬಡವರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.
ಇಷ್ಟೆಲ್ಲಾ ಸಾವು ನೋವುಗಳು ಸಂಭವಿಸುತ್ತಿದ್ದರೂ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕೂತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಜೀವ ಉಳಿಸಬೇಕಾದ ಸರ್ಕಾರ ಬಡವರ ಜೀವ ತೆಗೆಯಲು ಮೈಕ್ರೊ ಫೈನಾನ್ಸ್‌ಗೆ ಸುಪಾರಿ ಕೊಟ್ಟಿದೆ. ಮೈಕ್ರೊ ಫೈನಾನ್ಸ್‌ಕಂಪನಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕ್ರಮಕೈಗೊಳ್ಳದೆ ಹೋದರೆ,
ರಾಜ್ಯದಲ್ಲಿ ಇನ್ನೂ ಅದೆಷ್ಟು ಜೀವಗಳು ಬಲಿಯಾಗುತ್ತೇವೆ ಎನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ. ಕೂಡಲೇ ಕಾಂಗ್ರೆಸ್‌ಬಡವರ ಪರ ನಿಲ್ಲಬೇಕಿದೆ ಎಂದು ಬಿಜೆಪಿ ಆಗ್ರಹ ಮಾಡಿದೆ.