ಚಂದ್ರವಳ್ಳಿ ನ್ಯೂಸ್, ತುಮಕೂರು:
ಸರಳ ಸಜ್ಜನಿಕೆಯು ಪ್ರಾಮಾಣಿಕತೆಯ ಗೌಡರು. ಒಕ್ಕಲಿಗರ ಬದುಕಾದ ಕೃಷಿಯನ್ನು ನಿಷ್ಟೆಯಿಂದ ಮಾಡಿ ಗೌರವದ ಕೀರ್ತಿ ಗಳಿಸಿದ್ದರು ಮಾನ್ಯ ಸಿದ್ದೆಗೌಡರು ಹಾಗೂ ರಂಗೇಗೌಡರು.
ದಿವಂಗತ ಶ್ರೀ ಕೆ ಎಸ್ ಸಿದ್ದೇಗೌಡರು ಹಾಗೂ ದಿವಂಗತ ಶ್ರೀ ರಂಗೇಗೌಡರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೆ ಟಿ ಹಳ್ಳಿ ಗ್ರಾಮದ ಜೋಡಿ ಜಮೀನ್ದಾರರು, ಸಾಮಾಜಿಕ ನೀತಿಯಲ್ಲಿ ಕೆ ಟಿ ಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜನರ ವಿಶ್ವಾಸದಲ್ಲಿ ಗೌರವ ಸಂಪಾದಿಸಿದ್ದರು.
ಗೌಡರ ಮನೆತನಕ್ಕೆ ತಕ್ಕಂತೆ ಕೆ ಟಿ ಹಳ್ಳಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದರು. 30 ವರ್ಷಗಳ ಹಿಂದಿನ ದಿನಮಾನಗಳಲ್ಲಿ ಗೌಡರ ಕೃಷಿ ಬದುಕು ತಾಲ್ಲೂಕಿನ ರೈತರಿಗೆ ಆದರ್ಶಪ್ರಾಯಗಿತ್ತು.
ಸರ್ವಜನಾಂಗದ ವಿಶ್ವಾಸದ ಅಡಿಯಲ್ಲಿ ಊರಿನ ಸಾರ್ವಜನಿಕ ಕಾರ್ಯಗಳಿಗೆ ಮಾನ್ಯತೆ ನೀಡುತ್ತಿದ್ದರು . ಕೆ ಟಿ ಹಳ್ಳಿ ಸುತ್ತಮುತ್ತಲಿನ ಹತ್ತೂರಿನ ಜನತೆಯ ಅನೇಕ ವ್ಯಾಜ್ಯಗಳ ವಿಚಾರದಲ್ಲಿ ನ್ಯಾಯ ಸಮ್ಮತವಾಗಿ ಚರ್ಚಿಸಿ ನ್ಯಾಯದ ಪಾಲನೆಯಲ್ಲಿ ತಿರ್ಮಾನ ಮಾಡಿದ್ದಾರೆ ಇದಕ್ಕೆ ಸಾಕ್ಷಿ=ಗುಡ್ಡೆಯಾಗಿ ನನ್ನ ಚಿಕ್ಕ ವಯಸ್ಸಿನಲ್ಲಿ ನಮ್ಮ ಗ್ರಾಮದ ಜನತೆಯ ಮೆಚ್ಚಿಗೆ ಮಾತುಗಳಲ್ಲಿ ಕೇಳಿದ್ದೇನೆ ಹಾಗೂ ಕೆಲವು ಸನ್ನಿವೇಶಗಳನ್ನು ಗಮನಿಸಿದೆನೆ.
ಸಿದ್ದೇಗೌಡರ ಕಿರಿಯ ಸಹೋದರರಾದ ಕೆ ಎಸ್ ರಂಗೇಗೌಡರು ಸರಿಸುಮಾರು 15 ವರ್ಷಗಳ ಕಾಲ ಮಂಗಳವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜನಪರವಾಗಿ ಗೌರವಾನ್ವಿತ ಕಾರ್ಯಗಳನ್ನು ಮಾಡುವ ಮೂಲಕ ಜನಸಾಮಾನ್ಯರ ವಿಶ್ವಾಸದ ಮೆಚ್ಚಿಗೆ ಗಳಿಸಿದ್ದರು. ಈ ಇಬ್ಬರು ಸಹೋದರರು ರಾಮ=ಲಕ್ಷ್ಮಣರಂತೆ ಬಾಳಿ ಬದುಕಿದ ನೀತಿ ನಾಗರಿಕತೆಯ ಸಮಾಜಕ್ಕೆ ಆದರ್ಶಪ್ರಾಯ. ಈ ಇಬ್ಬರ ಸಹೋದರರ ವಿಚಾರಗಳು ಈಗಲು ಜನರ ಭಾವನೆಗಳ ಮಾತುಗಳಲ್ಲಿ ಆದರ್ಶದ ಸಂಕೇತವಾಗಿದೆ. ನನಗೂ ನಮ್ಮ ಮನೆತನದ ಹಿರಿಯರು ಬಾಳಿ ಬದುಕಿದ ಹಲವಾರು ವಿಚಾರಗಳು ನನ್ನ ನೆನಪಲ್ಲಿ ಗೌರವಾನ್ವಿತವಾಗಿ ಅಚ್ಚಳಿಯದೇ ಉಳಿದಿದೆ.
ಕೆ ಟಿ ಹಳ್ಳಿಯ ಸಿದ್ದೇಗೌಡರ ಹಾಗೂ ರಂಗೇಗೌಡರ ಮನೆತನದ ಸದಸ್ಯ ನಾನು ಎಂಬುದು ನನ್ನನು ಸೇರಿದಂತೆ ನನ್ನ ಕುಟುಂಬದ ಹಾಗೂ ನಮ್ಮ ರಕ್ತ ಸಂಬಂಧಿಗಳ ಎಲ್ಲಾ ಸದಸ್ಯರೆಲ್ಲರಿಗು ಹೆಮ್ಮೆ . ನಮ್ಮ ಮನೆತನದ ಹಿರಿಯರ ಬದುಕಿನ ಇತಿಹಾಸ ಸದಾ ನನ್ನ ಮನದಲ್ಲಿ ಗೌರವದ ಸಂಕೇತವಾಗಿದೆ.
ಲೇಖನ-ರಘು ಗೌಡ