ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಗರದ ಗೋಪಾಳ ಗೌಡ ಬಡಾವಣೆಯ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವವೊಂದು ಪತ್ತೆಯಾಗಿದ್ದು, ಅನುಮಾನಾಸ್ಪದ ಸಾವು ಎಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಧಾ (೪೮) ಮನೆಯ ಚಿಲಕ ಹಾಕಿಕೊಂಡು ಸಾವು ಕಂಡಿದ್ದು, ಶವದ ವಾಸನೆಯಿಂದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ ನಂತರ ಮನೆಯ ಬಾಗಿಲು ಮುರಿದು ನಂತರ ಶವನ್ನು ಹೊರ ತೆಗೆಯಲಾಗಿದೆ.
ಮದುವೆಯಾಗಿದ್ದರೂ ಗಂಡನಿಂದ ದೂರ ಉಳಿದು ಪ್ರತ್ಯೇಕವಾಗಿ ಸುಧಾ ಬದುಕು ಕಟ್ಟಿಕೊಂಡಿದ್ದರು. ಇವರಿಗೆ ಮಗನೊಬ್ಬನಿದ್ದು ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾನೆ. ತುಂಗಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.