ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ನಗರದ ಎಪಿಎಸ್ ಪಬ್ಲಿಕ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗಾಗಿ ಇದ್ದಿಲಿನಿಂದ ಬಿಡಿಸಿದ ಗಣಪತಿ ಕಲಾಕೃತಿಗಳ ರಚನಾ ಸ್ಪರ್ಧೆ ಆಯೋಜಿಸಲಾಗಿತ್ತು.
ಕಲೆಯು ಸಂಭ್ರಮವಾಗಿ ಅರಳಿದಾಗ ಅದ್ಭುತ ಕಲಾಕೃತಿ ರಚನೆಯಾಗುತ್ತದೆ ಎಂಬುದಕ್ಕೆ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಚಾರ್ಯ ಪಾಠ ಶಾಲೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಾಕ್ಷಿಯಾಗಿದ್ದಾರೆ. ಗಣೇಶನ ವಿವಿಧ ಭಂಗಿ, ಶೈಲಿ ಮತ್ತು ಗಾತ್ರಗಳ ಕಲಾಕೃತಿ ರಚಿಸುವ ಮೂಲಕ ತಮ್ಮ ಕಲಾತ್ಮಕ ಪ್ರತಿಭೆಯನ್ನು ವ್ಯಕ್ತಪಡಿಸಿದರು.
ಆರು ಅಡಿ ಎತ್ತರದ ಇದ್ದಿಲಿನಿಂದ ರಚಿಸಲ್ಪಟ್ಟ ರೇಖಾಚಿತ್ರ ಅಸಾಧಾರಣ ಕೃತಿಯಾಗಿ ಹೊರಹೊಮ್ಮಿದೆ. ಎಪಿಎಸ್ ಪಬ್ಲಿಕ್ ಸ್ಕೂಲ್‌ನ ಮೂವರು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರಾದ ಯಶಸ್ವಿನಿ ಮತ್ತು ಪ್ರಶಾಂತ್ ಅವರನ್ನು ಒಳಗೊಂಡ ತಂಡದ ಈ ವಿಭಿನ್ನ ಸೃಜನಾತ್ಮಕ ಪ್ರಯತ್ನ ಕೈಗೊಂಡಿತ್ತು.
ಎ ಪಿ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ವಿಷ್ಣು ಭರತ್ ಅಲಂಪಲ್ಲಿ ಅವರು ಈ ವಿಶಿಷ್ಟ ರೀತಿಯ ಗಣಪತಿಯ ರಚಿಸಿದವರಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ನಮ್ಮಲ್ಲಿರುವ ಅಪಾರ ಪ್ರತಿಭೆಗಳಿಗೆ ಸಾಕ್ಷಿಯಾಗಿದ್ದು, ಅಂತಹ ಸೃಜನಶೀಲತೆಯನ್ನು ಪೋಷಿಸುವ ಮತ್ತು ಆಚರಿಸುವ ಶ್ರೇಷ್ಠ ಕೆಲಸವನ್ನು ಮಾಡುತ್ತಿದೆ ಎಂದರು.