ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲ ಘಟಕ ಮತ್ತು ಸಂಯೋಜಿತ ಕಾಲೇಜುಗಳಲ್ಲಿ 2009-10 ರಿಂದ 2018-19 ರ ಶೈಕ್ಷಣಿಕ ಅವಧಿಯಲ್ಲಿ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆದು ವ್ಯಾಸಂಗ ಮಾಡಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದು ಪದವಿ ಪೂರೈಸಿಕೊಳ್ಳಲು ವಿಶ್ವವಿದ್ಯಾನಿಲಯವು ವಿಶೇಷ ಅವಕಾಶ ಒದಗಿಸಿದೆ.
ಪದವಿ ಪ್ರವೇಶ ಪಡೆದು ದ್ವಿಗುಣ ಅವಧಿ ಪೂರೈಸಿರುವ ಸಿಬಿಸಿಎಸ್ಯೇತರ ಮತ್ತು ಸಿಬಿಸಿಎಸ್ ಯೋಜನೆಯಡಿ ಅನುತ್ತೀರ್ಣರಾದ ಸ್ನಾತಕ ಪದವಿ ವಿದ್ಯಾರ್ಥಿಗಳು ೨೦೨೫ರ ಜೂನ್–ಜುಲೈನಲ್ಲಿ ನಡೆಯುವ ಪರೀಕ್ಷೆಗೆ ಹಾಜರಾಗಲು ಒಂದು ಬಾರಿಯ ಅಂತಿಮ ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ www.davangereuniversity.ac.in ಇಲ್ಲಿ ವೀಕ್ಷಿಸಬಹುದು. ಅಥವಾ ಸಹಾಯವಾಣಿ 7483283068/ 6363463991 ಇವರನ್ನು ಸಂಪರ್ಕಿಸಬಹುದು ಎಂದೂ ಹೇಳಿದ್ದಾರೆ.