ಮೈಸೂರಿನಿಂದ ಮಹಾ ಕುಂಭಮೇಳಕ್ಕೆ ವಿಶೇಷ ರೈಲು
ಚಂದ್ರವಳ್ಳಿ ನ್ಯೂಸ್, ಹುಬ್ಬಳ್ಳಿ
ಪ್ರಯಾಗರಾಜ್ ಮಹಾ ಕುಂಭಮೇಳಕ್ಕೆ ತೆರಳುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಮೈಸೂರಿನಿಂದ ಲಕ್ನೋಗೆ ಏಕಮಾರ್ಗ ವಿಶೇಷ ಎಕ್ಸ್ಪ್ರೆಸ್ ರೈಲು (೦೬೨೨೧) ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಮೈಸೂರು-ಲಕ್ನೋ ಏಕಮಾರ್ಗ ವಿಶೇಷ ರೈಲು (೦೬೨೨೧) ಶುಕ್ರವಾರ (ಫೆ.೧೪) ಬೆಳಗ್ಗೆ ೭:೩೦ ಗಂಟೆಗೆ ಮೈಸೂರಿನಿಂದ ಹೊರಟು, ಭಾನುವಾರ (ಫೆ.೧೬) ಸಂಜೆ ೪:೦೦ ಗಂಟೆಗೆ ಲಕ್ನೋ ನಿಲ್ದಾಣ ತಲುಪಲಿದೆ.
ಈ ರೈಲಿನಲ್ಲಿ ೧ ಎಸಿ ತ್ರಿ ಟೈರ್, ೮ ಸ್ಲೀಪರ್ ಕ್ಲಾಸ್, ೧೦ ಸಾಮಾನ್ಯ ದ್ವಿತೀಯ ದರ್ಜೆ ಮತ್ತು ೨ ಎಸ್‌ಎಲ್‌ಆರ್/ಡಿ ಬೋಗಿಗಳು ಇರಲಿವೆ. ಈ ರೈಲು ಮಂಡ್ಯ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮೀರಜ್, ಸಾಂಗ್ಲಿ, ಕರಾಡ್, ಪುಣೆ, ದೌಂಡ್ ಕಾರ್ಡ್ ಲೈನ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಕಟ್ನಿ, ಸತ್ನಾ, ಮಾಣಿಕ್ಪುರ್, ಪ್ರಯಾಗರಾಜ್ ಚಿಯೋಕಿ ಮತ್ತು ವಾರಾಣಸಿ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಮೈಸೂರು-ತುಂಡ್ಲಾ ವಿಶೇಷ ಎಕ್ಸ್ಪ್ರೆಸ್ ರೈಲು: ಜೊತೆಗೆ, ಮೈಸೂರು ಮತ್ತು ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲು ಸಂಖ್ಯೆ ೦೬೨೧೭ ಮೈಸೂರು-ತುಂಡ್ಲಾ ವಿಶೇಷ ಎಕ್ಸ್ಪ್ರೆಸ್ ರೈಲು ಫೆ.೧೭ರಂದು (ಸೋಮವಾರ) ಮೈಸೂರಿನಿಂದ ರಾತ್ರಿ ೯:೪೦ ಗಂಟೆಗೆ ಹೊರಟು, ಫೆಬ್ರವರಿ ೨೦ರಂದು (ಗುರುವಾರ) ಬೆಳಗ್ಗೆ ೯:೩೦ ಗಂಟೆಗೆ ತುಂಡ್ಲಾ ನಿಲ್ದಾಣ ತಲುಪಲಿದೆ.
ಪುನಃ ಇದೇ ರೈಲು (೦೬೨೧೮) ಫೆ. ೨೧ರಂದು (ಶುಕ್ರವಾರ) ತುಂಡ್ಲಾ ನಿಲ್ದಾಣದಿಂದ ಬೆಳಗ್ಗೆ ೧೧:೩೦ ಗಂಟೆಗೆ ಹೊರಟು, ಭಾನುವಾರ (ಫೆ.೨೩) ರಾತ್ರಿ ೧೦ ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.