ಎಲೆಕ್ಟ್ರಿಕಲ್ ಬೈಕ್ ಶೋ ರೂಮ್​ನಲ್ಲಿ ಏಕಾಏಕಿ ಬೆಂಕಿ, ಹಲವು ಬೈಕ್ ಬೆಂಕಿಗೆ ಆಹುತಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಲೆಕ್ಟ್ರಿಕಲ್ ವಾಹನಗಳ ಶೋ ರೂಮ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು
ಸುಮಾರು 30ಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಅಗ್ನಿಗೆ ಆಹುತಿಯಾಗಿರುವ ಘಟನೆ ರಾಜಾಜಿನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

- Advertisement - 

ರಾಜಾಜಿನಗರದ ಡಾ.ರಾಜ್​​ಕುಮಾರ್ ರಸ್ತೆಯಲ್ಲಿರುವ ಒಕಿನೋವಾ ಎಲೆಕ್ಟ್ರಿಕಲ್ ಬೈಕ್ ಶೂ ರೂಮ್​ನಲ್ಲಿ ಸೋಮವಾರ ಮಧ್ಯಾಹ್ನ 2.30ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಕ್ಷರ್ಣಾಧದಲ್ಲಿ ಅಗ್ನಿ ವ್ಯಾಪ್ತಿಸಿ ಅನಾಹುತ ಸಂಭವಿಸಿದ್ದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಬೈಕ್ ಶೂ ರೂಮ್​ನಲ್ಲಿ ಎಂದಿನಂತೆ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಸಿಬ್ಬಂದಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ.

- Advertisement - 

ಕಳೆದ ವಾರವಷ್ಟೇ ಆರ್​​ಟಿಓ ಅಧಿಕಾರಿಗಳು ಶೋ ರೂಮ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹಲವು ಲೋಪದೋಷ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. 250 ವ್ಯಾಟ್ ಬ್ಯಾಟರಿ ಬಳಕೆಯ 25 ಕಿ.ಮೀ ವೇಗದ ವಾಹನಗಳಿಗೆ ಮಾತ್ರ ಪರವಾನಗಿ ಪಡೆಯಲಾಗಿತ್ತು. ಆದರೆ ಶೋ ರೂಮ್​ನಲ್ಲಿ ನಿಗದಿಗಿಂತ ಹೆಚ್ಚು ಸಾಮರ್ಥ್ಯ ಬಳಕೆಯ ಬ್ಯಾಟರಿ ಬಳಸುತ್ತಿರುವುದು ಕಂಡುಬಂದಿತ್ತು. ಈ ಬಗ್ಗೆ ವರದಿಯನ್ನು ಸಿದ್ಧಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಟರಿ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದ್ದು, ಬೆಂಕಿ ಆರಿಸಿದ ನಂತರ ಪರಿಶೀಲಿಸಲಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್​​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement - 

ರಾಜಾಜಿನಗರ ರಸ್ತೆಯಲ್ಲಿನ ಮೈ ಇವಿ ಶೋ ರೂಮ್​ನಲ್ಲಿಯೂ ಕಳೆದ ವರ್ಷ ನ.19ರಂದು ಅಗ್ನಿ ಅವಘಡ ಸಂಭವಿಸಿತ್ತು. ಈ ವೇಳೆ ಶೋ ರೂಮ್​ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ಸಜೀವ ದಹನವಾಗಿದ್ದಳು. ದುರಂತದಲ್ಲಿ 25ಕ್ಕಿಂತ ಹೆಚ್ಚು ಇವಿ ಬೈಕ್​ಗಳು ಬೆಂಕಿಗಾಹುತಿಯಾಗಿದ್ದನ್ನು ಸ್ಮರಿಸಬಹುದಾಗಿದೆ.

 

 

Share This Article
error: Content is protected !!
";