ವಿದ್ಯಾರ್ಥಿ ಫೋನ್ ಮಾಡಿದ್ದಕ್ಕೆ ರಾಕ್ಷಸನಂತೆ ವರ್ತಿಸಿದ ಶಿಕ್ಷಕನ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿದ್ಯಾರ್ಥಿಯೊಬ್ಬ ತಮ್ಮ ಮನೆಗೆ ಫೋನ್ ಕರೆ ಮಾಡಿದ್ದಕ್ಕೆ ಶಿಕ್ಷಕ ಕಾಲಿನಿಂದ ಎಲ್ಲೆಂದರಲ್ಲಿ ಒದ್ದು
, ಮನಸೋ ಇಚ್ಚೆ ಥಳಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಶಿಕ್ಷಕ ವೀರೇಶ್ ಹಿರೇಮಠ್ ವಿದ್ಯಾರ್ಥಿಗೆ ಕಾಲಿನಿಂದ ಒದೆಯುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನರ ರಾಕ್ಷಸನ ಕ್ರೂರ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

- Advertisement - 

ನಾಯಕನಹಟ್ಟಿಯ ಶ್ರೀಗುರು ತಿಪ್ಪೇಸ್ವಾಮಿ ದೇವಸ್ಥಾನದ ಅಧೀನದ ವೇದ ಅಧ್ಯಯನ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ವೀರೇಶ್ ಹಿರೇಮಠ್ ವಿದ್ಯಾರ್ಥಿಯನ್ನು ನೆಲಕ್ಕೆ ತಳ್ಳಿ ಎಲ್ಲೆಂದರಲ್ಲಿ ಮನಬಂದಂತೆ ಒದ್ದಿದ್ದಾನೆ. ಬಳಿಕ ಕೈಯಿಂದ ಮನಸ್ಸೋ ಇಚ್ಛೆ ಥಳಿಸಿದ್ದಾನೆ. 

- Advertisement - 

ಶಿಕ್ಷಕನ ಕ್ರೂರ ವರ್ತನೆ ವಿದ್ಯಾರ್ಥಿಗೆ ಕೈಗೆ ಪೆಟ್ಟಾದರೂ ಬಿಡದೆ ಹೊಡೆಯುವುದನ್ನು ಮುಂದುವರೆಸಿದ್ದಾನೆ. ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಂಗಾಧರ್ ದೂರು ನೀಡಿದ್ದು, ನಾಯಕನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿಕ್ಷಕ ನಾಪತ್ತೆಯಾಗಿದ್ದು  ಪೊಲೀಸರು ಹುಡುಕಾಟ ಮಾಡಿ ಕಲಬುರ್ಗಿಯಲ್ಲಿದ್ದ ಆರೋಪಿಯನ್ನು ಬಂಧಿಸಿ ಕರೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೆಲ ಪೋಷಕರು ಶಾಲೆ ಬಳಿ ಪ್ರತಿಭಟನೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೃತ್ಯ ಎಸಗಿರುವ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಬರ್ಬರ ಹಲ್ಲೆ ವಿಚಾರ ತಿಳಿದಿದೆ. ಮಕ್ಕಳ ಮೇಲೆ ಯಾರೂ ಕೂಡಾ ಈ ರೀತಿಯ ಹಲ್ಲೆ ಮಾಡಬಾರದು. ಈ ಪ್ರಕರಣವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೇನೆ. ತಪಿತಸ್ಥ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

 

 

 

Share This Article
error: Content is protected !!
";