ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪತ್ರಕರ್ತ ಕೆ.ಎಂ.ಮುತ್ತಸ್ವಾಮಿ(ಕಣ್ಣನ್) ಇವರು ೩೫ ವರ್ಷಗಳಿಂದಲೂ ಪತ್ರಿಕೋದ್ಯಮದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ವಾಸವಿ ಮಹಲ್ ರಸ್ತೆಯಲ್ಲಿರುವ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ವತಿಯಿಂದ ಸೋಮವಾರ ಸನ್ಮಾನಿಸಿ ಗೌರವಿಸಲಾಯಿತು.
ವಾಸವಿ ಕ್ಲಬ್ ಫೋರ್ಟ್‌ನಿಂದ ವಿಶ್ವಾದ್ಯಂತ ನಡೆಯುವ ವಾಸವಿ ವೀಕ್ ಡೇ ಕಾರ್ಯಕ್ರಮದ ಅಂಗವಾಗಿ ಗೌರವಿಸಲಾಯಿತು.
ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಅಧ್ಯಕ್ಷ ಕೋಟೇಶ್ವರ ಗುಪ್ತ ಮಾತನಾಡುತ್ತ ಪತ್ರಿಕೋದ್ಯಮದಲ್ಲಿ ಶಿಸ್ತು ಮತ್ತು ಬದ್ದತೆಯಿಂದ ಕೆಲಸ ಮಾಡುತ್ತಿರುವ ಕೆ.ಎಂ.ಮುತ್ತುಸ್ವಾಮಿ ಎಲ್ಲರಿಗೂ ಚಿರಪರಿಚಿತರು. ಪತ್ರಿಕೋದ್ಯಮವನ್ನೆ ವೃತ್ತಿಯನ್ನಾಗಿಸಿಕೊಂಡಿರುವ ಇವರ ಸೇವೆ ನಿರಂತರವಾಗಿರಬೇಕಾದರೆ ಕನ್ಯಕಾ ಪರಮೇಶ್ವರಿಯ ಕೃಪೆಯಿರಲಿ ಎಂದು ಹಾರೈಸಿದರು.
ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಖಜಾಂಚಿ ಸತ್ಯನಾರಾಯಣಗುಪ್ತ ದೊಂತಿ, ಆರ್ಯವೈಶ್ಯ ಸಂಘದ ಸಹ ಕಾರ್ಯದರ್ಶಿ ಕೆ.ಎಸ್.ಮಂಜುನಾಥಶೆಟ್ಟಿ, ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ನಿರ್ದೇಶಕರು ಹಾಗೂ ಸದಸ್ಯರುಗಳಾದ ಅವಿನಾಶ್, ಚಂದ್ರಮೋಹನ್ ಎಂ.ಎಸ್. ಸಂತೋಷ್, ಜ್ಯೋತಿ ಲಕ್ಷ್ಮಣ್, ಎಸ್.ಪಿ.ಶ್ರೀನಿವಾಸ್ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಪತ್ರಿಕಾ ವಿತರಕ ಪಿ.ನಾಗರಾಜ್‌ಶೆಟ್ಟಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.