ಮಹಿಳೆಯನ್ನ ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿರುವ ವಿಡಿಯೋ ವೈರಲ್

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಮಹಿಳೆ ಒಬ್ಬರನ್ನು ಅರೆಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.
ದಾವಣಗೆರೆ  ಜಿಲ್ಲೆ ಚನ್ನಗಿರಿ ತಾಲೂಕಿನ ಗೋಣಿಕೊಪ್ಪಲು ಗ್ರಾಮದಲ್ಲಿ ಒಂದೂವರೆ ವರ್ಷದ ಹಿಂದೆ ನಡೆದಿದ್ದ ಹಲ್ಲೆ

ವಿಡಿಯೋ ಈಗ ವೈರಲ್ ಆಗಿದೆ. ಏನಿದು ಘಟನೆ-
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಗುರುಮೂರ್ತಿ ಅವರ ಪತ್ನಿ ಮೇಲೆ ಕೆಲ ಮಹಿಳೆಯರು ಮನಬಂದಂತೆ ತಳಿಸಿರುವುದು ವಿಡಿಯೋದಲ್ಲಿದೆ.

- Advertisement - 

ವಿಕಲಾಂಗ ಪತಿ ಗುರುಮೂರ್ತಿ ಎದುರಿಗೇ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಹಲ್ಲೆಯ ಬಗ್ಗೆ ದೂರು ನೀಡಲು ಹೋದರೆ ಚನ್ನಗಿರಿ ಪೊಲೀಸರು ಇದುವರೆಗೂ ಕೇಸ್​ ಪಡೆದಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.

 

- Advertisement - 

Share This Article
error: Content is protected !!
";