ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಫ್ಲರ್‌ಹಾಕೊಂಡು ಡ್ರಾಮಾ ಮಾಡುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿ ವಂಚನೆ ಮಾಡುತ್ತಿದ್ದ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಊಸರವಳ್ಳಿ ನಾಟಕಕ್ಕೆ ರಾಷ್ಟ್ರ ರಾಜಧಾನಿಯ ಜನತೆ ಫುಲ್‌ಸ್ಟಾಪ್‌ಇಟ್ಟಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಉತ್ಸಾಹ, ಭರವಸೆಯನ್ನು ಇಟ್ಟುಕೊಂಡು ದಿಲ್ಲಿಯ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಇದರೊಂದಿಗೆ ನಾಗರಿಕರೇ ದಿಲ್ಲಿಯ ಮಾಲೀಕರು ಎಂಬುದನ್ನು ಸಾಬೀತುಪಡಿಸಿದ್ದಾರೆ.
ನೀವು ನಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಗೊಳಿಸದೆ, ಉತ್ತಮ ಆಡಳಿತ ನೀಡುತ್ತೇವೆ. ಡಬಲ್‌ಎಂಜಿನ್‌ಸರ್ಕಾರವು ದಿಲ್ಲಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ.