ನಗರದ ಸ್ವಚ್ಛತೆಗೆ ಸಾರ್ವಜನಿಕರ ಸಹಕಾರ ಅಗತ್ಯ : ಎ ವಾಸೀಂ

News Desk

ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದಂತೆ ನಗರ ಅಭಿವೃದ್ಧಿ  ಪೌರಾಡಳಿತ ನಿರ್ದೇಶನಾಲಯದ ವ್ಯಾಪ್ತಿಯ ನಗರಸಭೆ ಕಾರ್ಯಾಲಯ ಹಿರಿಯೂರು ವತಿಯಿಂದ ಸೆಪ್ಟಂಬರ್ 17 ರಿಂದ ಅಕ್ಟೋಬರ್  2 ರವರಿಗೆ ಸ್ವಚ್ಛತೆಯೇ ಸೇವೆ ಸ್ವಚ್ಛೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಪೌರಾಯುಕ್ತ ಎ ವಾಸೀಂ ಹೇಳಿದರು.

ನಗರದ ರಾಷ್ಟ್ರೀಯ ಅಕಾಡೆಮಿ ಶಾಲೆಯ ಹತ್ತಿರ ಸ್ವಚ್ಛತೆಯ ಕಾರ್ಯಕ್ರಮಕ್ಕೆ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಡಿ ಸಣ್ಣಪ್ಪ ಸ್ವಚ್ಛತಾ ಆಂದೋಲನ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವ ಆಂದೋಲನಕ್ಕೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement - 

ಸಾರ್ವಜನಿಕರು ರಸ್ತೆಯ ಅಕ್ಕ ಪಕ್ಕ ಚರಂಡಿಗೆ ಕಸ ಹಾಕಬಾರದು, ಪ್ರತಿನಿತ್ಯ ಸಾರ್ವಜನಿಕರು ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಳ್ಳುವುದರಿಂದ ಯಾವುದೇ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ, ಒಳ್ಳೆಯ ವಾತಾವರಣ ಕಾಪಾಡಿಕೊಳ್ಳುವುದರ ಜೊತೆಗೆ ಪೌರ ಕಾರ್ಮಿಕರ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ವಾಸೀಂ ಮನವಿ ಮಾಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಡಿ ಸಣ್ಣಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ನಗರದ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು ಸಾರ್ವಜನಿಕರು ಕೈ ಜೋಡಿಸಬೇಕು ಕಸವನ್ನು ಸಿಕ್ಕ ಸಿಕ್ಕಲ್ಲಿ ಹಾಕಬಾರದು. ಪ್ರತಿ ದಿನ ಬೆಳಿಗ್ಗೆ ನಗರಸಭೆಯ ಕಸದ ಗಾಡಿಗಳು ಬರುತ್ತವೆ. ಆ ಗಾಡಿಗೆ ಹಸಿ ಕಸ ಒಣ ಕಸ  ಬೇರ್ಪಡಿಸಿ ಹಾಕುವುದರ ಮೂಲಕ ನಗರದ ಸ್ವಚ್ಛತೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

- Advertisement - 

ನಗರದ ಸಂಘ ಸಂಸ್ಥೆಗಳು ಯುವಕರು ವಿದ್ಯಾರ್ಥಿಗಳು ನಗರ ಸಭೆ ಕೈಗೊಳ್ಳುವ ಸ್ವಚ್ಛತೆಗೆ ಕೈಜೋಡಿಸಿದರೆ ನಗರವನ್ನು ಸ್ವಚ್ಛವಾಗಿ ಇಡಲು ಸಾಧ್ಯ. ನಗರದಲ್ಲಿ ಇರುವ ಶಾಲೆ ಕಾಲೇಜು ವಿದ್ಯಾರ್ಥಿಗಳು ಪ್ರತಿಯೊಂದು ಶಾಲೆಯ ವತಿಯಿಂದ ಯಾವುದಾದರೂ ವಾರ್ಡ್ಗಳಲ್ಲಿ ಸ್ವಚ್ಛತೆಗೆ ವಿದ್ಯಾರ್ಥಿಗಳು ಮುಂದಾಗುವುದರ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸಲು ಯುವ ಪೀಳಿಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಸಭೆಯ ಆರೋಗ್ಯ ನಿರೀಕ್ಷಕರಾದ ಸುನಿಲ್ ಕುಮಾರ್, ಸಂಧ್ಯಾ, ಅಶೋಕ್, ಮಹಾಲಿಂಗಪ್ಪ, ರಾಷ್ಟ್ರೀಯ ಅಕಾಡೆಮಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಪೌರಕಾರ್ಮಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾಗರಿಕರು ನಗರದ ಸ್ವಚ್ಛತೆಯನ್ನು ಕಾಪಾಡಿದರೆ ನಗರದ ಜನರು ಆರೋಗ್ಯವಾಗಿರಲು ಸಾಧ್ಯ ಹಾಗೂ ಮನೆಯ ಅಕ್ಕ ಪಕ್ಕ ಚರಂಡಿಗೆ ಕಸ ಸೇರಿದಂತೆ ಯಾವುದೇ ಘನ ತ್ಯಾಜ್ಯ ವಸ್ತುಗಳನ್ನ ಹಾಕದೆ ಮನೆಯ ಸುತ್ತ ಮುತ್ತಲ ಸ್ವಚ್ಛತೆ ಕಾಪಾಡುವುದರಿಂದ ಒಳ್ಳೆಯ ವಾತಾವರಣ ಹಾಗೂ ಸಾಂಕ್ರಾಮಿಕ ರೋಗಗಳಿಂದ ದೂರ ಇರಬಹುದು ಮತ್ತು ಪೌರಕಾರ್ಮಿಕರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಮೂಲಕ ಸಾರ್ವಜನಿಕರು ಸಹಕಾರ ನೀಡುವುದು ಬಹಳ ಮುಖ್ಯವಾದದ್ದು, ಕಸವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ತಪ್ಪಿಸುವುದು.

ಕಸವನ್ನು ಮೂಲದಲ್ಲಿಯೇ ವಿಂಗಡಿಸುವುದು. ಪೌರಕಾರ್ಮಿಕರನ್ನು ಗೌರವಿಸುವುದು ಮತ್ತು ಬೀದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ನಗರ ಸ್ವಚ್ಛತಾ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು. ನಾಗರಿಕರ ಪ್ರೀತಿ ವಾತ್ಸಲ್ಯ ಬಹು ದೊಡ್ಡದು.
ಎ.ವಾಸೀಂ ಪೌರಾಯುಕ್ತರು, ನಗರ ಸಭೆ, ಹಿರಿಯೂರು.

 

Share This Article
error: Content is protected !!
";