ನ್ಯಾಯಕ್ಕಾಗಿ ಪತಿ ಮನೆ ಮುಂದೆ ಪ್ರಭಟನೆ ಮಾಡುತ್ತಿರುವ ಪತ್ನಿ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ತುಮಕೂರು ನಗರದಲ್ಲಿರುವ ಗಂಡ ಪ್ರಜ್ವಲ್ ಶಂಕರ್ ಮನೆ ಮುಂದೆ ಕೂತು ಪತ್ನಿ ಸುಪ್ರಿಯರಾಣಿ ನ್ಯಾಯ ಬೇಕು ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ.

8 ತಿಂಗಳ ಹಿಂದೆ ಮದುವೆಯಾದ ಇವರಿಗೆ ಗಂಡನ ಮನೆಗೆ ಬಂದ ನಾಲ್ಕನೇ ದಿನದಿಂದಲೇ ವರದಕ್ಷಿಣೆ ಕಿರುಕುಳ ಶುರುವಾಗಿದೆ.

- Advertisement - 

ಒಂದು ಚಿಕ್ಕ ಹೋಟೆಲ್ ಇಟ್ಟುಕೊಂಡಿರುವ ಸುಪ್ರಿಯ ತಂದೆ-ತಾಯಿ 20 ಲಕ್ಷ ಖರ್ಚು ಮಾಡಿ ಮಗಳ ನಿಶ್ಚಿತಾರ್ಥ ಮತ್ತು ಮದುವೆ ಮಾಡಿದ್ದಾರೆ. 

ಮದುವೆ ಸಮಯದಲ್ಲಿ 130 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿ ನೀಡಿದ್ದಾರಂತೆ. ಗಂಡ ತನ್ನನ್ನು ಬೇಡ ಅನ್ನುತ್ತಿರುವುದರಿಂದ ತನಗೆ ಸೇರಿದ ಒಡವೆ, ಬೇರೆ ವಸ್ತುಗಳು ಅವರ ಮನೆಯಲ್ಲೇ ಇವೆ, ವಾಪಸ್ಸು ಕೊಡಲಿ ಎಂದು ಸುಪ್ರಿಯ ಧರಣಿಗೆ ಕೂತಿರುವ ಘಟನೆ ಬೆಳಕಿಗೆ ಬಂದಿದೆ.

- Advertisement - 

 

 

 

Share This Article
error: Content is protected !!
";