ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಗರದ ಯುವತಿಯೊಬ್ಬಳು ಮದುವೆ ಹೆಸರಿನಲ್ಲಿ ವ್ಯಕ್ತಿಯೊಬ್ಬನಿಗೆ ವಂಚನೆ ಮಾಡಲು ಹೋಗಿ ಚಿಕ್ಕಬಳ್ಳಾಪುರದಲ್ಲಿ ಸಿಕ್ಕಿಬಿದ್ದಿದ್ದಾಳೆ.
ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬ ಮರು ಮದುವೆ ಸಂಬಂಧ ತನ್ನ ಹೆಸರನ್ನು ಮ್ಯಾಟ್ರಿಮೋನಿಯೊಂದರಲ್ಲಿ ನೋಂದಾಯಿಸಿದ್ದ. ಈ ವೇಳೆ ಆತನಿಗೆ ಶಿವಮೊಗ್ಗ ಮೂಲದ , ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿರುವ ಕೋಮಲಾ ಎಂಬಾಕೆ ಮ್ಯಾಟ್ರಿಮೋನಿಯಲ್ಲಿ ಲಿಂಕ್‌ಆಗಿದ್ದಾಳೆ. ಈ ಬಗ್ಗೆ ಮಾತುಕತೆ ನಡೆದು ಕೋಮಲೆ ಆತನನ್ನು ಮದುವೆಯಾಗಲು ಒಪ್ಪಿದ್ದಳು.
ಇದರ ನಡುವೆ ಕೋಮಲಾ ತನ್ನ ಮೊಬೈಲ್‌ನಿಂದ ವರನಿಗೆ ಮೆಸೇಜ್‌ಕಳುಹಿಸಿ ತನಗೆ ಹಣದ ಅವಶ್ಯಕತೆ ಇರುವುದಾಗಿ ತಿಳಿಸಿದ್ದಾರೆ. ತನ್ನ ಗಂಡ ಸಾವನ್ನಪ್ಪಿದ್ದು, ಅದರ ಪರಿಹಾರದ ಹಣ 6 ಕೋಟಿ ರೂಪಾಯಿ ಬಂದಿದೆ. ಇಬ್ಬರು ಮದುವೆಯಾಗುವುದರಿಂದ ಆ ಹಣ ಇಬ್ಬರಿಗೂ ಸೇರುತ್ತದೆ. ಆದರೆ ಪರಿಹಾರದ ಹಣ ಪಡೆಯಲು 7,40,000 ಟ್ಯಾಕ್ಸ್‌ಕಟ್ಟಬೇಕಿದೆ. ಆ ಹಣವನ್ನು ಹೊಂದಿಸಿ ಎಂದಿದ್ದಳು.
ಇದನ್ನು ಹೌದು ಎಂದು ನಂಬಿದ ಸಂತ್ರಸ್ತ ಹಣ ಕೊಟ್ಟು ಮುಂದಿನ ಮಾತುಕತೆಗೆ ಸಿದ್ದವಾಗಿದ್ದಾನೆ. ಈ ವೇಳೆ ಕೋಮಲಾ ಹಣ ಪಡೆದ ಬೆನ್ನಲ್ಲೇ ಎಲ್ಲಾ ಲಿಂಕ್‌ಬ್ಲಾಕ್‌ಮಾಡಿ ಹುಡುಗನಿಂದ ದೂರವಾಗಿದ್ದಳು.. ಇದರಿಂದ ಅನುಮಾನಗೊಂಡ ಹುಡುಗ ಚಿಕ್ಕಬಳ್ಳಾಪುರ ಸೈಬರ್‌ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಸದ್ಯ ಸೈಬರ್‌ಪೊಲೀಸರು ಕೋಮಲಾಳನ್ನ ಬಂಧನ ಮಾಡಿದ್ದಾರೆ.
ತನಿಖೆಯ ವೇಳೆ ಆಕೆಯ ವಿರುದ್ಧ ಇದೇ ರೀತಿಯ ಇನ್ನಷ್ಟು ವಂಚನೆ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.