ಬಯಲು ಬಸವಣ್ಣ ಜಾತ್ರೆಯಲ್ಲಿ ಮೈ ನವೀರೇಳಿಸಿದ ಕುಸ್ತಿ ಪಂದ್ಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
 ಕುಸ್ತಿ ಸಂಘದಿಂದ ಬಯಲು ಬಸವಣ್ಣ ಕಡಲೆಕಾಯಿ ಪರಿಷೆ ಪ್ರಯುಕ್ತ ಪ್ರಪ್ರಥಮ ಬಾರಿಗೆ 9ಜಿಲ್ಲೆಗಳ ಅಂತರ ಜಿಲ್ಲಾ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಯಿತು.

        ಬಹಳ ವರ್ಷಗಳ ನಂತರ ನಡೆದ ಮಟ್ಟಿ ಕುಸ್ತಿ ಪಂದ್ಯಾವಳಿ ಕ್ರೀಡಾ ಪಟುಗಳ ಹಾಗೂ ಕುಸ್ತಿ ಪ್ರೇಮಿಗಳಲ್ಲಿ ವಿಶೇಷ ಆಸಕ್ತಿ ಮೂಡಿತ್ತು. 9ಜಿಲ್ಲೆಗಳ ಸುಮಾರು ನೂರಾ ಐವತ್ತಕ್ಕೂ ಹೆಚ್ಚು ಕುಸ್ತಿ ಪಟುಗಳ ಎಂಬತ್ತು ಜೋಡಿಗಳು ಕುಸ್ತಿ ಪಂದ್ಯದಲ್ಲಿ ಕಾದಾಡಿ ತಮ್ಮ ತಂತ್ರ ಕೌಶಲ್ಯ ಮೆರೆದು ದೊಡ್ಡಬಳ್ಳಾಪುರದ ಕುಸ್ತಿ ಪ್ರೇಮಿಗಳಿಗೆ ರಸ ದೌತಣ ನೀಡಿದರು. ಅದರಲ್ಲೂ ವಿಶೇಷವಾಗಿ ಇಪ್ಪತ್ತು ಮಹಿಳಾ ಕುಸ್ತಿ ಪಟುಗಳು ಅಖಾಡಕ್ಕಿಳಿದು ತಮ್ಮ ಶೌರ್ಯ ಮೆರೆದರು.

ಈ ಪಂದ್ಯಾವಳಿಯಲ್ಲಿ ವಿಜೇತರದವರು ಮಹಿಳೆಯರ ದೊಡ್ಡಬಳ್ಳಾಪುರ ಯುವ ಕಿಶೋರಿ… ಕುಮಾರಿ ಶ್ರೀ ರಕ್ಷಾ, ದೊಡ್ಡಬಳ್ಳಾಪುರ ಯುವ ಕಿಶೋರ… ಫೈ. ಅಭಿಷೇಕ್, ದೊಡ್ಡಬಳ್ಳಾಪುರ ಕಿಶೋರ… ಫೈ. ಸೋಫಿಯಾನ್, ದೊಡ್ಡಬಳ್ಳಾಪುರ ಕುಮಾರ…. ಫೈ. ಅಂಬರೀಷ್, ದೊಡ್ಡಬಳ್ಳಾಪುರ ಕೇಸರಿ.. ಫೈ. ಧನಂಜಯ್, ದೊಡ್ಡಬಳ್ಳಾಪುರ ಕಂಠೀರವ.. ಫೈ. ಮಧುಸೂದನ್. ಹೀಗೆ 6ವಿಭಾಗಗಳಲ್ಲಿ ವಿಜೇತರಾದ ಫೈಲ್ವಾನರಿಗೆ ಬೆಳ್ಳಿ ಗದೆಗಳನ್ನು ನೀಡಿ ಸತ್ಕಾರಿಸಲಾಯಿತು.

         ಮದಗಜಗಳ ಕಾದಾಟ ದಂತಿದ್ದ ಯುವ ಕುಸ್ತಿ ಪಟುಗಳ ಪಂದ್ಯಾವಳಿ ನೆರೆದ ಪ್ರೇಕ್ಷಕರಿಗೆ ಹಾಗೂ ಕುಸ್ತಿ ಪ್ರಿಯರಿಗೆ ಉತ್ತಮ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ದೊಡ್ಡಬಳ್ಳಾಪುರದ ಎಸ್. ಆರ್. ಸಿ ಗರಡಿಯ ಯುವ ಫೈಲ್ವಾನ್ ಪ್ರಥಮ ಬಹುಮಾನ ಗೆದ್ದು ಗದೆ ಸ್ವೀಕರಿಸಿದ್ದು ಸ್ಥಳೀಯರಲ್ಲಿ ವಿಶೇಷ ಅಭಿಮಾನ ಮೂಡಿಸಿತ್ತೆನ್ನುವುದರಲ್ಲಿ ಅನುಮಾನವಿಲ್ಲ.

ತಡ ರಾತ್ರಿಯವರೆಗೂ ನಡೆದ ಪಂದ್ಯಾವಳಿ ಯನ್ನು ಸಹಸ್ರರೂ ಪ್ರೇಕ್ಷಕರು ವೀಕ್ಷಿಸಿದರು. ನಿಜಕ್ಕೂ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿ ದೊಡ್ಡಬಳ್ಳಾಪುರ ಕ್ರೀಡಾ ಪ್ರೇಮಿಗಳಿಗೆ, ಹಾಗೂ ಜನತೆಗೆ ರಸ ದೌತಣ ನೀಡುವಲ್ಲಿ ಯಶಸ್ವಿಯಾದ ದೊಡ್ಡಬಳ್ಳಾಪುರ ಕುಸ್ತಿ ಸಂಘದ ಪ್ರಮುಖರಾದ ಫೈ. ಚೌಡಪ್ಪ, ಫೈ. ಪಿಳ್ಳಣ್ಣ, ಫೈ. ಲಕ್ಷ್ಮೀನಾರಾಯಣ, ಶ್ರೀನಿವಾಸ್, ವಿಶ್ವನಾಥ್, ಗಣೇಶ್, ಮುನಿಕೃಷ್ಣ, ನಗರಸಭಾ ಸದಸ್ಯ ಪದ್ಮನಾಭ ಹಾಗೂ ಗೆಳೆಯರು ನಿಜಕ್ಕೂ ಅಭಿನಂದನಾರ್ಹರು.

 

- Advertisement -  - Advertisement -  - Advertisement - 
Share This Article
error: Content is protected !!
";