ಗಣೇಶೋತ್ಸವದಲ್ಲಿ ಡ್ಯಾನ್ಸ್ ಬೇಡ ಎಂದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ

khushihost
  1. ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ : ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡಬೇಡ ಎಂದು ತಾಯಿ ಮತ್ತು ಸಹೋದರ ಬುದ್ದಿಮಾತು ಹೇಳಿದ್ದಕ್ಕೆ ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಪ್ಯಾಲಯಗುರ್ಕಿಯಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಗಿರೀಶ್ (21) ಎಂದು ಗುರುತಿಸಲಾಗಿದೆ. ಗಣೇಶೋತ್ಸವದಲ್ಲಿ ಡ್ಯಾನ್ಸ್ ಮಾಡದಂತೆ ಅಮ್ಮ ಮತ್ತು ಅಣ್ಣ ಬುದ್ದಿಮಾತು ಹೇಳಿದ್ದಾರೆ.

ಇದರಿಂದ ನೊಂದ ಗಿರೀಶ್ ಗ್ರಾಮದ ಮುತ್ತರಾಯಸ್ವಾಮಿ ದೇಗುಲದ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರೇಸಂದ್ರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -  - Advertisement - 
Share This Article
error: Content is protected !!
";