ಉದ್ಯೋಗ ನಿರೀಕ್ಷಿಸಿ ವಲಸೆ ಹೋಗುತ್ತಿರುವ ಯುವ ಪೀಳಿಗೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯವಿದು. ಕಾಲಕ್ಕೆ ಸರಿಯಾಗಿ ಬಾರದ ಮಳೆ, ಬೆಳೆ, ಬೆಳೆಗೆ ಸರಿಯಾಗಿ ಸಿಗದ ದರ, ಕಾಲಕಾಲಕ್ಕೆ ಸರಿಯಾಗಿ ಸರ್ಕಾರ ಉದ್ಯೋಗ ನೇಮಕಾತಿ ಮಾಡಿಕೊಳ್ಳದೆ ಇರುವುದರಿಂದ ಗ್ರಾಮೀಣ ಭಾಗದ ಯುವ ಪೀಳಿಗೆ ಉದ್ಯೋಗ ನಿರೀಕ್ಷಿಸಿ ಪಟ್ಟಣ ಸೇರುತ್ತಿದ್ದಾರೆ ಹಾಗೂ ವಲಸೆ ಹೋಗುತ್ತಿದ್ದಾರೆ.

ನಾನು ಬಸ್ ನಿಲ್ದಾಣದಲ್ಲಿ ಸೇರಿದ್ದ ಜನ ಸಂದಣಿ ಕಂಡು ಬೆಕ್ಕಸ ಬೆರಗಾದೆ. ಹಿಂದಿನ ದಿನಗಳಲ್ಲಿ ಸಾಲು ಸಾಲು ರಜೆಗಳು ಇದ್ದಿದ್ದರಿಂದ ಹಾಗೂ ವಾರಾಂತ್ಯವಾಗಿರುವುದರಿಂದ ಈ ದೃಶ್ಯ ನಿಲ್ದಾಣದಲ್ಲಿ ಉದ್ಭವಿಸಿತ್ತು. ಸಾರಿಗೆ ಇಲಾಖೆ ಚಿತ್ರದುರ್ಗದಿಂದ ಬೆಂಗಳೂರು ಕಡೆಗೆ ಸುಮಾರು 50 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದ್ದರು.

- Advertisement - 

ದುಡಿಮೆ ಬಯಸಿ, ವಿದ್ಯಾಭ್ಯಾಸದ ಸಲುವಾಗಿ ಹಾಗೂ ವಿವಿಧ ಉದ್ದೇಶಗಳಿಗೆ ಹೊರ ಊರುಗಳಿಗೆ ಹೋಗಿದ್ದ ಜನ ಶಾಲೆಗಳಿಗೆ ಮಧ್ಯಂತರ ರಜೆ ಮತ್ತು ದಸರಾ ಹಬ್ಬದ ಪ್ರಯುಕ್ತ ತಮ್ಮ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದರು. ನಾಳೆ ಸೋಮವಾರ ಕರ್ತವ್ಯ ದಿನವಾಗಿರುವುದರಿಂದ ಕರ್ತವ್ಯಕ್ಕೆ ಹಿಂದಿರುವ ಸಲುವಾಗಿ ಪ್ರಯಾಣಿಕರಿಂದ ಇಂದು ನಿಲ್ದಾಣದ ತುಂಬಾ ಜನ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.

ಚಿತ್ರದುರ್ಗದಿಂದ ಕೇವಲ ಬೆಂಗಳೂರಿಗೆ ಮಾತ್ರವಲ್ಲದೆ ಶಿವಮೊಗ್ಗ, ಹುಬ್ಬಳ್ಳಿ, ಕೊಟ್ಟೂರು ಹೀಗೆ ಎಲ್ಲಾ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ತಮ್ಮ ಬಸ್ ಗಳಿಗಾಗಿ ಕಾಯುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಮಕ್ಕಳು ಮತ್ತು ವಯೋ ವೃದ್ಧರ ಪಾಡು ಹೇಳುತ್ತೀರದಾಗಿತ್ತು. ನಿಲ್ದಾಣಕ್ಕೆ ಬಸ್ ಬರುತ್ತಿದ್ದ ಹಾಗೆ ಜನ ಯಾವ ಬಸ್ಸು? ಯಾವ ಊರಿನ ಕಡೆಗೆ? ಎಂದು ಕೇಳದೆ ಬಸ್ ಬಳಿ ನಾ ಮುಂದು, ತಾ ಮುಂದು ಎಂದು ಓಡಿ ಹೋಗುತ್ತಿದ್ದರು.. ಪ್ರಯಾಣಿಕರನ್ನು ನಿಯಂತ್ರಿಸಲು ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಆರಕ್ಷಕರ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು.

- Advertisement - 

ಹಳ್ಳಿಗಳಲ್ಲಿ ಕಡಿಮೆಯಾಗಿರುವ ಕೃಷಿ ಚಟುವಟಿಕೆಗಳು, ಪಶುಪಾಲನೆಗೆ ಅಗತ್ಯ ಮೇವು ದೊರಕದೇ ಇರುವುದು, ಕುಲಕಸುಬುಗಳು ಮರೆಯಾಗುತ್ತಿದೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳು ತುಂಬಾ ವಿರಳ, ಬದಲಾದ ಜೀವನ ಶೈಲಿ, ಆಧುನಿಕತೆ, ಅತಿಯಾದ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಜನಸಂಖ್ಯೆ, ಹೀಗೆ ಸಮಾಜ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಿದೆ ಮತ್ತು ಸಾಗುತ್ತದೆ.

ಇಂದು ಭಾನುವಾರ ರಜಾ ದಿನವಾಗಿದ್ದರಿಂದ ನಾನು ನನ್ನ ಕುಟುಂಬ ಸಮೇತವಾಗಿ ಚಿತ್ರದುರ್ಗದ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದೆ. ವಾಪಸು ಹಿರಿಯೂರಿಗೆ ಹಿಂದಿರುಗಲು ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದು ನೋಡಿದಾಗ ಪರಿಸ್ಥಿತಿ ಈ ರೀತಿಯದ್ದಾಗಿತ್ತು.

ಇದು ಶಿವಮೊಗ್ಗ, ದಾವಣಗೆರೆ, ಚಳ್ಳಕೆರೆ, ಹಿರಿಯೂರು, ತುಮಕೂರು ಹಾಗೂ ಎಲ್ಲಾ ನಿಲ್ದಾಣಗಳಲ್ಲಿ ಪ್ರತಿ ವಾರಂತ್ಯ ಸಾಮಾನ್ಯವಾಗಿರುತ್ತದೆ.

ಸುಮಾರು ಅರ್ಧ ತಾಸಿನ ನಂತರ ಒಂದು ತುಂಬಿದ ಬೆಂಗಳೂರು ಬಸ್ ಹಿಡಿದು ಹಾಗೋ ಹೀಗೂ ಹಿರಿಯೂರಿಗೆ ಪ್ರಯಾಣ ಆರಂಭಿಸಿದೆವು, ಮಧ್ಯದಲ್ಲಿ ಸಿಗುವ ಗುಯಿಲಾಳು ಟೋಲ್ ಗೇಟ್ ಬಳಿ ವಾಹನಗಳಿಂದ ಕಿಕ್ಕಿರಿದ ಟ್ರಾಫಿಕ್ ಉಂಟಾಗಿತ್ತು ಅಲ್ಲಿ ಅರ್ಧ ತಾಸು ಸಮಯ ಕಾಯಬೇಕಾಗಿತ್ತು.
ಲೇಖನ: ವೇಣುಕುಮಾರ್. ಎಂ, ಉಪನ್ಯಾಸಕರು.

 

Share This Article
error: Content is protected !!
";