ಬೀದಿ ಬದಿ, ನಿರ್ಗತಿಕ ಮತ್ತು ಅಲೆಮಾರಿ ಮಕ್ಕಳಿಗೆ ಆಧಾರ್ ವಿತರಣೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಸೋಮವಾರ ಬೀದಿ ಬದಿ, ನಿರ್ಗತಿಕ ಮತ್ತು ಅಲೆಮಾರಿ ಮಕ್ಕಳ ಆಧಾರ್ ನೋಂದಣಿ ಮಾಡಿಸುವ ಸಂಬಂಧ ಇಲಾಖಾ, ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಕುರಿತು ಸಾಥಿ ಅಭಿಯಾನದಡಿ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿ, ದಾಖಲೆಗಳೊಂದಿಗೆ ಮಕ್ಕಳನ್ನು ಕರೆಯಿಸಿ, ಆಧಾರ್ ಕಾರ್ಡ್ ನೊಂದಣಿ ಹಾಗೂ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

- Advertisement - 

ಕಳೆದ ಜೂನ್ 03ರಂದು ಸಾಥಿ ಸಮಿತಿ ರಚನೆಯಾಗಿದ್ದು, ಪದವಿ ಪೂರ್ವಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಗಳ ವತಿಯಿಂದ ಬೀದಿ ಬದಿ, ನಿರ್ಗತಿಕ ಮತ್ತು ಅಲೆಮಾರಿ ಮಕ್ಕಳ ಆಧಾರ ನೊಂದಣಿ ಮಾಡಿಸುವ ಸಂಬಂಧ ಸಾಥಿ ಅಭಿಯಾನದಡಿ ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿ, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ನಿರ್ಗತಿಕ ಮಕ್ಕಳಿದ್ದರೂ ಅವರಿಗೆ ಆಧಾರ್ ಕಾರ್ಡ್‍ನ್ನು ಮಾಡಿಸಿಕೊಡಲಾಗುತ್ತದೆ.

- Advertisement - 

ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಘಟಕದ  ಸಹಯೋಗದಲ್ಲಿ ಆಧಾರ ಕಾರ್ಡ್ ನೊಂದಣಿ ಹಾಗೂ ವಿತರಿಸುವ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರೋಣ ವಾಸುದೇವ್ ಉದ್ಘಾಟಿಸಿ ಮಾತನಾಡಿ, ಸುಪ್ರಿಂಕೋರ್ಟ್ ನಿರ್ದೇಶನದ ಅನ್ವಯ ಅನಾಥ, ನಿರ್ಗತಿಕಮಗು ಯಾವುದೇ ಯೋಜನೆಯ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅಗತ್ಯವಿರುತ್ತದೆ.  ಅಂತೆಯೇ ಈ ಸಂಬಂಧ ಇಲಾಖೆಗಳು ಕಾರ್ಯೋನ್ಮುಖರಾಗಬೇಕಾಗಿರುತ್ತದೆ  ಹಾಗೂ ಈ ಮಕ್ಕಳಿಗೆ ಆಧಾರ್ ಕಾರ್ಡ್ ಸೌಲಭ್ಯ ಒದಗಿಸುವ ಅಗತ್ಯವಿರುತ್ತದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಮಾತನಾಡಿ, ಕಡ್ಡಾಯವಾಗಿ ಆರು ತಿಂಗಳಿಂದ ಆರು ವರ್ಷದವರೆಗೆ ಅಂಗನವಾಡಿ ಮಕ್ಕಳಿಗೆ ಐ.ಸಿ.ಡಿ.ಎಸ್ ಯೋಜನೆಯ ಸೌಲಭ್ಯಗಳನ್ನು ನೀಡುತ್ತಿದ್ದು, ಗರ್ಭಿಣಿ ಬಾಣಂತಿಯರು ಕಡ್ಡಾಯವಾಗಿ ಆಧಾರ್ ಕಾರ್ಡ್ ನೀಡಿ ಸೌಲಭ್ಯ ಪಡೆಯುತ್ತಿದ್ದಾರೆ.  ಪೋಷಣ್ ಟ್ರಾಕ್‍ನಲ್ಲಿ ನಾವುಗಳು ಆಧಾರ್ ಸಮೇತ ನೊಂದಣಿ ಮಾಡುತ್ತಿದ್ದು, ಸರ್ಕಾರದ ಸೌಲಭ್ಯದಿಂದ ವಂಚಿತರಾಗದಂತೆ ಇರಲು ಕಡ್ಡಾಯವಾಗಿ ಆಧಾರ್‍ಕಾರ್ಡ್ ಪಡೆಯುವಂತೆ ಮಾಹಿತಿ ನೀಡಿದರು.

- Advertisement - 

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, ಶಾಲಾ ಶಿಕ್ಷಣ  ಇಲಾಖೆ ಎಂ.ಆರ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎ.ಎಂ.ವೀಣಾ, ಆಪ್ತ ಸಮಾಲೋಚಕ ರಂಗನಾಥ್, ಆಧಾರ್ ಕಾರ್ಡ್ ನೊಂದಣಿದಾರ ವೆಂಕಟೇಶ್ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಇದ್ದರು.

Share This Article
error: Content is protected !!
";