ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಆಮ್ ಆದ್ಮಿ ಪಾರ್ಟಿ ಪ್ರತಿಭಟನೆ

News Desk

ಚಂದ್ರವಳ್ಳಿ ನ್ಯೂಸ್, ಹರಿಹರ:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಆಮ್ ಆದ್ಮಿ ಪಾರ್ಟಿಯಿಂದ ತಹಶೀಲ್ದಾರ ಮೂಲಕ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.

    ನಗರದ ತಾಲೂಕ ಆಡಳಿತ ಸೌಧದ ಬಳಿ ಆಮ್ ಆದ್ಮಿ ಪಾರ್ಟಿ ತಾಲೂಕ ಅಧ್ಯಕ್ಷ ಜಿ.ಎಚ್.ಬಸವರಾಜ್ ನೇತೃತ್ವದಲ್ಲಿ ಆಗಮಿಸಿದ್ದ ಕಾರ್ಯಕರ್ತರು ಕೇಂದ್ರ ಸರ್ಕಾರದ ತೆರಿಗೆ ಹೆಚ್ಚಳ ಮತ್ತು ರಾಜ್ಯ ಸರ್ಕಾರದ ವಿವಿಧ ಸಾಮಗ್ರಿಗಳ ಬೆಲೆ ಹೆಚ್ಚಳ ವಿರೋಧಿಸಿ ಘೋಷಣೆ ಕೂಗಿ ತಹಶೀಲ್ದಾರ ಕೆ.ಎಂ. ಗುರುಬಸವರಾಜ್ ರವರಿಗೆ ಮನವಿ ಸಲ್ಲಿಸಿದರು.

    ಮನವಿ ಸಲ್ಲಿಸಿ ಆಮ್ ಆದ್ಮಿ ಪಾರ್ಟಿಯ ಮುಖಂಡರು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕ ಹೆಚ್ಚಳ, ಆಸ್ತಿಗಳ ಮೇಲಿನ ಮಾರ್ಗಸೂಚಿ ದರ ಹೆಚ್ಚಳ, ವಾಹನಗಳ ರಿಜಿಸ್ಟ್ರರೇಶನ್ ಶುಲ್ಕ ಹೆಚ್ಚಳ, ನಂದಿನಿ ಹಾಲಿನ ಬೆಲೆ ಮೂರು ಪಟ್ಟು ಹೆಚ್ಚಳ, ಭಾರತ ದೇಶಿಯ ಮದ್ಯದ ಬೆಲೆ ಹೆಚ್ಚಳ, ಪೆಟ್ರೋಲ್ ಮತ್ತು ಡಿಸೈಲ್ ಮೇಲಿನ ರಾಜ್ಯ ತೆರಿಗೆ ಹೆಚ್ಚಳ, ಎಲೆಕ್ಟ್ರಿಕ್ ವಾಹನ ಗಳ ಮೇಲೆ ಇದ್ದ ತೆರಿಗೆ ವಿನಾಯಿತಿ ರದ್ದು, ಸರ್ಕಾರಿ ಕಾಲೇಜುಗಳ ಪಾಲಿಟೆಕ್ನಿಕ್ ಇಂಜಿನೀಯರಿಂಗ್ ಮುಂತಾದ ಕಾಲೇಜುಗಳ ವ್ಯಾಸಂಗ ಶುಲ್ಕ ದುಬಾರಿ,ಕುಡಿಯುವ ನೀರಿದ ದರ ದುಪ್ಪಟ್ಟು, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿ, ಕರ್ನಾಟಕ ದಾದ್ಯಂತ ಅಂದಾಜು 2 ಕೋಟಿ ಗ್ರಾಮೀಣ ಭಾಗದ ಮನೆಗಳ ಮೇಲೆ ಬಿ ಖಾತೆಯ ಹೆಸರಿನಲ್ಲಿ ತೆರಿಗೆ ದರೋಡೆ,

ಕೆ ಪಿ.ಟಿ.ಸಿ.ಎಲ್ ಎಸ್ಕಾಂ ನೌಕರರ ಪಿಂಚಣಿ ಹೊರೆ ನೇರವಾಗಿ ರಾಜ್ಯದ ನಾಗರೀಕರುಗಳ ಮೇಲೆ ಬಿ.ಬಿ.ಎಂ.ಪಿಯ ವ್ಯಾಪ್ತಿಯ ಆಸ್ತಿದಾರರು ಆಯಾ ವರ್ಷದಲ್ಲಿ ತೆರಿಗೆ ಕಟ್ಟಲು ವಿಫಲರಾದಲ್ಲಿ ಮುಂದಿನ ವರ್ಷ ದುಪ್ಪಟ್ಟು ಆಸ್ತಿ ತೆರಿಗೆ ಹಾಗೂ 15% ದಂಡ ದೊಂದಿಗೆ ಪಾವತಿ ಮಾಡುವ ಆದೇಶ ಜೆಜಿಯು ತಲೆ ಕಂದಾಯ ರೀತಿ ಇದೆ, ಕೆಪಿ.ಟಿ.ಸಿ ಎಲ್ ನೂತನ ಮೀಟರ್ ಗಳ ಬೆಲೆ ಲಕ್ಷಾಂತರ ರೂಪಾಯಿ ಹೇರಿಕೆ, ರೈತರು ಪಂಪ್‌ಸೆಟ್ಟುಗಳ ಮೇಲೆ ದುಬಾರಿ ವೆಚ್ಚ, ವಿದ್ಯುತ್ ದರ ಏರಿಕೆ, ಮೆಟ್ರೋ ದರ 100% ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರ್ಕಾರದ ಬೆಲೆ ಏರಿಕೆಗಳಾದ ಟೋಲ್ ದರ ಏರಿಕೆ , ಔಷದಿಗಳ ಬೆಲೆ ಏರಿಕೆ , ಕಾರ್ ಗಳ ಮೇಲಿನ ತೆರಿಗೆ ಏರಿಕೆ , ವಿದೇಶಿ ಶಿಕ್ಷಣಕ್ಕೆ ಹೆಚ್ಚಿನ ಶುಲ್ಕ, ವೀಸಾ ಶುಲ್ಕ , ಹಾಗೂ ಸಿಎನ್‌ಜಿ ಗಳ ಮೇಲಿನ ತೆರಿಗೆ ಹೆಚ್ಚಳ ಇವುಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಿಳಿಸಿದರು.

    ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ತಾಲೂಕ ಉಪಾಧ್ಯಕ್ಷ ಎಸ್.ಪಿ.ರೋಹಿತ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಯುಸೂಫ್,ತಾಲೂಕು ಸಂಘಟನಾ ಕಾರ್ಯದರ್ಶಿ ನಾಗೇನಹಳ್ಳಿ ವೀರಭದ್ರಪ್ಪ, ಮೊಹಮ್ಮದ್ ಬಾಷಾ, ರವೀಂದ್ರ, ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";