ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಧಿಕಾರ ದುರ್ಬಳಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಕಚೇರಿಗಳಿಗಾಗಿ ಸಿಎ ನಿವೇಶನ; ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅಧಿಕಾರ ದುರ್ಬಳಕೆಯ ಮತ್ತೊಂದು ನಿದರ್ಶನ! ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ದೂರಿದರು.

ರಾಜ್ಯದ ಬಡವರಿಗೆ ಭೂಮಿ, ಮನೆ ಕೊಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ. ಆದರೆ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನರ ಬಗ್ಗೆಯಾಗಲಿ, ಅಭಿವೃದ್ಧಿಯ ಕಡೆಗಾಗಲಿ ಆಸಕ್ತಿಯಿಲ್ಲ. ಬೊಕ್ಕಸ ಲೂಟಿ, ಭ್ರಷ್ಟಾಚಾರಗಳೇ ಅವರ ದುರಾಡಳಿತ ಮಂತ್ರ. ಈಗ ಕರ್ನಾಟಕ ಕಾಂಗ್ರೆಸ್ ಸರ್ಕಾರ, ತನ್ನ ಪಕ್ಷದ ಕಚೇರಿಗಳಿಗಾಗಿ, ನಿಯಮಗಳನ್ನು ಮೀರಿ, ತನ್ನದೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ರಾಜ್ಯಾದ್ಯಂತ ಕೋಟ್ಯಂತರ ರೂಪಾಯಿ ಮೌಲ್ಯದ ಸಿಎ ನಿವೇಶನಗಳನ್ನು ಕೇವಲ 5% ದರದಲ್ಲಿ ನೀಡಿರುವುದು ಖಜಾನೆಗೂ ನಷ್ಟ, ರಾಜ್ಯದ ಜನತೆಗೆ ಮಾಡುತ್ತಿರುವ ದ್ರೋಹ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

- Advertisement - 

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರೇ, ಜನಸಾಮಾನ್ಯರು ಒಂದು ಸಣ್ಣ ನಿವೇಶನಕ್ಕಾಗಿ ದಶಕಗಳ ಕಾಲ ಅಲೆಯುತ್ತಿರುವಾಗ, ಕಾಂಗ್ರೆಸ್ ಭವನಗಳ ಹೆಸರಲ್ಲಿ, ಬೊಕ್ಕಸಕ್ಕೂ ನಷ್ಟವುಂಟು ಮಾಡಿ, ನಿಯಮಗಳನ್ನು ಗಾಳಿಗೆ ತೂರಿ, ರಾಜ್ಯಸರ್ಕಾರವೇ ಭೂಕಬಳಿಕೆಗೆ ಇಳಿದಿರುವುದು ಅಧಿಕಾರದ ದುರುಪಯೋಗವಲ್ಲವೇ? ನಿಮ್ಮ ಭ್ರಷ್ಟಾಡಳಿತದಿಂದಾಗಿ ಪ್ರಗತಿ ಕಾರ್ಯಗಳಂತೂ ದೂರವೇ ಉಳಿಯಿತು, ಬೊಕ್ಕಸಕ್ಕೆ ನಷ್ಟವುಂಟು ಮಾಡಿ, ನಿಯಮಗಳನ್ನು ಮೀರಿ ಭೂಕಬಳಿಸುವುದು ಅನೈತಿಕವಲ್ಲವೇ

ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಹಣವಿಲ್ಲ ಎನ್ನುವ ಕಾಂಗ್ರೆಸ್ ಸರ್ಕಾರ, ಸಾರಿಗೆ ನೌಕರರಿಗೆ ನೀಡಲು ಬೊಕ್ಕಸ ಖಾಲಿ ಎನ್ನುವ ನಿಮ್ಮ ಸರ್ಕಾರ, ನಿಮ್ಮ ಪಕ್ಷದ ಕಚೇರಿಗಳಿಗೆ ಮಾರುಕಟ್ಟೆ ಬೆಲೆಗಿಂತ ಅತಿ ಕಡಿಮೆ ಬೆಲೆಗೆ ನಿವೇಶನ ತೆಗೆದುಕೊಳ್ಳುತ್ತಿರುವುದು ಎಷ್ಟು ಸರಿ?

- Advertisement - 

ನಿಮಗೆ ಸಾರ್ವಜನಿಕ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಯೇ ಮುಖ್ಯ ಎನ್ನುವುದು ಇದರಿಂದಲೇ ಸಾಬೀತಾಗಿದೆ. ಇದಕ್ಕಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದರ ವಿರುದ್ಧ ನಾವು ಸುಮ್ಮನಿರುವ ಪ್ರಶ್ನೆಯೇ ಇಲ್ಲ! ಕೂಡಲೇ ಈ ನಿವೇಶನಗಳನ್ನು ಹಿಂದಿರುಗಿಸದಿದ್ದರೆ ಪಕ್ಷ ಬೀದಿಗಿಳಿದು ಹೊರಡುವುದು ನಿಶ್ಚಿತ! ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಚ್ಚರಿಸಿದ್ದಾರೆ.

 

Share This Article
error: Content is protected !!
";