ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ. ಬಿಎಂಟಿಸಿ 320 ಹೊಚ್ಚ ಹೊಸ ಬಸ್ಗಳ ಮೊರೆ ಹೋಗಿದೆ. ಈಗಾಗಲೇ ಎಸಿ ಎಲೆಕ್ಟ್ರಿಕ್ ಬಸ್ಗಳ ಪ್ರಾಯೋಗಿಕ ಸಂಚಾರ ಯಶಸ್ವಿಯೂ ಆಗಿದೆ.
ಸದ್ಯದಲ್ಲೇ ಈ ಎಲ್ಲಾ ಬಸ್ಗಳಿಗೆ ಸಿಎಂ, ಡಿಸಿಎಂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಲಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಯಾಣಿಕರು, ಪ್ರಾಯೋಗಿಕ ಸಂಚಾರದ ವೇಳೆ ಈ ಬಸ್ನಲ್ಲಿ ನಾವುಗಳು ಸಂಚಾರ ಮಾಡಿದ್ದೇವೆ. ತುಂಬಾ ಚೆನ್ನಾಗಿದೆ ಎಂದಿದ್ದಾರೆ.
ಎಸಿ ಬಸ್ಗಳು ಅಶೋಕ್ ಲೇಲ್ಯಾಂಡ್ ನ ಓಂ ಕಂಪನಿಯಾದ್ದಗಿವೆ. ಒಟ್ಟು 320 ಎಸಿ ಎಲೆಕ್ಟ್ರಿಕ್ ಬಸ್ಗಳು ಕಿಮೀಗೆ 65 ರುಪಾಯಿಯಂತೆ ಗುತ್ತಿಗೆ ಆಧಾರದಲ್ಲಿ 12 ವರ್ಷಗಳ ಕಾಲ ರಾಜಧಾನಿಯಲ್ಲಿ ಸಂಚಾರ ಮಾಡಲಿವೆ.
ಎಸಿ ಎಲೆಕ್ಟ್ರಿಕ್ ಬಸ್ ಎಲ್ಲೆಲ್ಲಿ ಸಂಚಾರ?
ಕೆಂಪೇಗೌಡ ವಿಮಾನ ನಿಲ್ದಾಣ, ಮೆಜೆಸ್ಟಿಕ್, ಕತ್ರಿಗುಪ್ಪೆ, ಐಟಿಪಿಎಲ್, ಎಚ್ಎಸ್ಆರ್ ಲೇಔಟ್ ಡಿಪೋದಿಂದ ಬಸ್ ಕಾರ್ಯಾಚರಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ.
ವಿಮಾನ ನಿಲ್ದಾಣದಿಂದ ವಾಯುವಜ್ರ ಬಸ್ ಸೇವೆ ಸ್ಥಗಿತ ಮಾಡಿ, ಈ ಎಸಿ ಎಲೆಕ್ಟ್ರಿಕ್ ಬಸ್ಗಳನ್ನು 900 ಟ್ರಿಪ್ಗಳಲ್ಲಿ ಬಸ್ ಓಡಿಸಲು ಬಿಎಂಟಿಸಿ ಯೋಜನೆ ರೂಪಿಸುತ್ತಿದೆ. ಒಟ್ಟಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ವಾಯುಮಾಲಿನ್ಯಕ್ಕೆ ಕೊಂಚ ಮಟ್ಟಿಗಾದರೂ ಈ ಎಲೆಕ್ಟ್ರಿಕ್ ಬಸ್ಗಳು ಬ್ರೇಕ್ ಹಾಕುವುದರಲ್ಲಿ ಅನುಮಾನವೇ ಇಲ್ಲ.