Ad imageAd image

ಯುವತಿ ಮಲಗುವ ಕೋಣೆ ಹಾಗೂ ವಾಶ್‌ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ: ಆರೋಪಿ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ :
ಬಾಡಿಗೆದಾರ ಯುವತಿ
, ಮಲಗುವ ಕೋಣೆ, ರಹಸ್ಯ ಕ್ಯಾಮೆರಾ, ವಾಶ್‌ರೂಮ್ ಪೂರ್ವ ದೆಹಲಿಯ ಶಕರ್‌ಪುರ ಪ್ರದೇಶದಲ್ಲಿ ತನ್ನ ಬಾಡಿಗೆದಾರ ಯುವತಿಯ ಮನೆಯ ಮಲಗುವ ಕೋಣೆ ಮತ್ತು ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಂತ್ರಸ್ತೆ ಯುವತಿ ನಾಗರಿಕ ಸೇವಾ ಆಕಾಂಕ್ಷಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

ನಗರದಿಂದ ಹೊರಗೆ ಹೋಗುವ ಮೊದಲು ಕೀಗಳನ್ನು ತನ್ನ ಮನೆಯ ಓನರ್‌ನ ಮಗ ಕರಣ್‌ಗೆ ಹಸ್ತಾಂತರಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಇದರ ನಂತರ ಯುವತಿಯ ವಾಟ್ಸಾಪ್‌ನಲ್ಲಿ ಕೆಲವು ಅಸಾಮಾನ್ಯ ಚಟುವಟಿಕೆ ಗಮನಿಸಿದ್ದರು. ಈ ಬಗ್ಗೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಯುವತಿಯು ತನ್ನ ವಾಟ್ಸಪ್‌ಲಿಂಕ್ ಆಗಿರುವ ಡಿವೈಸ್‌ಗಳನ್ನು ಪರಿಶೀಲಿಸಿದಾಗ, ತನ್ನ ವಾಟ್ಸಾಪ್ ಖಾತೆಯು ಅಪರಿಚಿತ ಲ್ಯಾಪ್‌ಟಾಪ್‌ಗೆ ಲಾಗ್ ಇನ್ ಆಗಿರುವುದು ಕಂಡುಬಂದಿತ್ತು. ತಕ್ಷಣವೇ ಅದರಿಂದ ಲಾಗ್ ಔಟ್ ಮಾಡಿದೆಎಂದು ಅವರು ಹೇಳಿದ್ದಾಗಿ ಪೊಲೀಸ್ ಉಪ ಕಮಿಷನರ್ (ಪೂರ್ವ) ಅಪೂರ್ವ ಗುಪ್ತಾ ಅವರು ಹೇಳಿದ್ದಾರೆ.

ಇದರ ನಂತರ ಯುವತಿಯು ಅನುಮಾನಾಸ್ಪದಳಾಗಿ ರಹಸ್ಯ ಕ್ಯಾಮೆರಾಗಳು ಅಥವಾ ಕಣ್ಗಾವಲು ಸಾಧನಗಳಿಗಾಗಿ ತನ್ನ ಅಪಾರ್ಟ್ಮೆಂಟ್ ಅನ್ನು ಹುಡುಕಲು ಪ್ರಾರಂಭಿಸಿದ್ದು, ಈ ವೇಳೆ ಅವರ ಬಾತ್ರೂಮ್‌ನ ಬಲ್ಬ್ ಹೋಲ್ಡರ್ನಲ್ಲಿ ಕ್ಯಾಮೆರಾ ಇರುವುದು ಕಂಡುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಇದರ ಬೆನ್ನಲ್ಲೇ ಸೋಮವಾರ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ದೂರಿನ ನಂತರ ಪೊಲೀಸ್ ತಂಡವು ಸಂಪೂರ್ಣ ಹುಡುಕಾಟ ನಡೆಸಿದ್ದು, ಅವರ ಮಲಗುವ ಕೋಣೆಯ ಬಲ್ಬ್ ಹೋಲ್ಡರ್‌ನಲ್ಲಿ ಅಳವಡಿಸಲಾದ ಮತ್ತೊಂದು ಕ್ಯಾಮೆರಾವನ್ನು ಪತ್ತೆ ಮಾಡಿದೆ ಎಂದು ಅಧಿಕಾರಿ ಹೇಳಿದ್ದಾರೆ. ತಾನು ಊರಿಂದ ಹೊರಗೆ ಹೋದಲ್ಲೆಲ್ಲಾ ಅದೇ ಕಟ್ಟಡದ ಬೇರೆ ಮಹಡಿಯಲ್ಲಿ ವಾಸಿಸುವ ಕರಣ್‌ಗೆ ತನ್ನ ಮನೆಯ ಕೀಲಿಗಳನ್ನು ಕೊಟ್ಟಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

 

- Advertisement -  - Advertisement - 
Share This Article
error: Content is protected !!
";