ಚಂದ್ರವಳ್ಳಿ ನ್ಯೂಸ್, ಭದ್ರಾವತಿ :
ಶಾಲಾ ಬಾಲಕಿ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಭದ್ರಾವತಿ ಹೊಸಮನೆ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಭದ್ರಾವತಿ ನಗರದ 35 ವರ್ಷದ ವ್ಯಕ್ತಿಯೇ ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ದ ಕಿಡ್ನ್ಯಾಪ್ ಯತ್ನ ಹಾಗೂ ಪೋಕ್ಸೋ ಕಾಯ್ದೆ ಯಡಿ ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಶಾಲೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ 10 ವರ್ಷದ ಬಾಲಕಿಯ, ಎಂದಿನಂತೆ ಪರಿಚಯಸ್ಥರ ಆಟೋದಲ್ಲಿ ಶಾಲೆಯಿಂದ ಸಂಜೆ ಮನೆಗೆ ಆಗಮಿಸಿದ್ದಳು.
ಬೈಕ್ ನಲ್ಲಿ ಆಗಮಿಸಿದ್ದ ಆರೋಪಿ, ತನ್ನ ಜೊತೆ ಬರುವಂತೆ ಹಾಗೂ ಚಾಕ್’ಲೇಟ್ ಕೊಡಿಸುವುದಾಗಿ ಬಾಲಕಿಗೆ ಹೇಳಿದ್ದ. ನಂತರ ಬಲವಂತವಾಗಿ ಬಾಲಕಿಯನ್ನು ಕರೆದೊಯ್ಯುವ ಯತ್ನ ನಡೆಸಿದ್ದ.
ಬಾಲಕಿ ಕೂಗಿಕೊಂಡಿದ್ದರಿಂದ ಸ್ಥಳದಿಂದ ಓಡಿ ಹೋಗಿದ್ದ. ಈ ಸಂಬಂಧ ಆರೋಪಿ ವಿರುದ್ದ ಪೋಷಕರು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಸಬ್ ಇನ್ಸ್’ಪೆಕ್ಟರ್ ಕೃಷ್ಣಕುಮಾರ್ ಮಾನೆ ನೇತೃತ್ವದ ಪೊಲೀಸ್ ತಂಡವು ತನಿಖೆ ಆರಂಭಿಸಿತ್ತು.
ಸದರಿ ಪ್ರದೇಶಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲವಾಗಿದೆ.