ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಸಮಾಪನೆಗೊಂಡ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮಕೈಗೊಳ್ಳಲಾಗಿದೆ.
ಹಿರಿಯೂರನ ಆಯಿಷಾ ಅಲ್ಪಸಂಖ್ಯಾತರ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ, ವಿಶ್ವಕರ್ಮ ಕುಶಲ ಕೈಗಾರಿಕಾ ಸಂಘ, ಪರಿಶಿಷ್ಟ ಜಾತಿ ತೆಂಗಿನ ನಾರಿನ ಉತ್ಪಾದನಾ ಕೈಗಾರಿಕಾ ಸಂಘ, ಶ್ರೀ ಶಿವಶರಣ ಹರಳಯ್ಯ ಪರಿಶಿಷ್ಟ ಜಾತಿ ವಿವಿದೋದ್ದೇಶ ಸಂಘ,
ಹಿರಿಯೂರು ತಾಲ್ಲೂಕು ಅಲೆಮಾರಿ ಜನಾಂಗದವರ ವಿವಿದೋದ್ದೇಶ ಸಂಘ, ಮಹಿಳಾ ಪತ್ತಿನ ಸಂಘ, ಜನತಾ ಹತ್ತಿ ಬೆಳೆಗಾರರ ಸಂಘ, ಹಿರಿಯೂರು ತಾಲ್ಲೂಕು ಮೂರ್ತೇದಾರರ ಸಂಘ, ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿ, ಹರ್ತಿಕೋಟೆ, ಹಾಲುಮಾದೇನಹಳ್ಳಿ, ದಿಂಡಾವರ ಹಾಲು ಉತ್ಪಾದಕರ ಸಹಕಾರ ಸಂಘ, ಜೆ.ಜಿ.ಹಳ್ಳಿ ಶ್ರೀದೇವಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘ, ಚನ್ನಯ್ಯನಹಟ್ಟಿ ಶ್ರೀ ಚಿತ್ರಲಿಂಗೇಶ್ವರಸ್ವಾಮಿ ಕುರಿ ಸಾಕಾಣಿಕೆ ಮತ್ತು ಉಣ್ಣೆ ಸಹಕಾರ ಸಂಘಗಳು ಸಮಾಪನೆಗೊಂಡಿವೆ.
ಸಮಾಪನೆಗೊಂಡ ಸಹಕಾರ ಸಂಘಗಳ ಸದಸ್ಯರ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಈ ಪ್ರಕಟಣೆಯ ದಿನಾಂಕದ 15 ದಿನಗಳೊಳಗಾಗಿ ಕಚೇರಿಗೆ ಸಲ್ಲಿಸಲು ತಿಳಿಸಿದೆ.
ಈ ಸಂಘಗಳು ಸ್ಥಗಿತಗೊಂಡು ಸದಸ್ಯರಿಂದ ಪುನಃಶ್ಚೇತನಗೊಳಿಸಲು ಮತ್ತು ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಆಸಕ್ತಿ ಇಲ್ಲದ ಕಾರಣ ನೋಂದಣಿ ರದ್ದತಿಗೆ ಕ್ರಮವಿಡಲಾಗಿದೆ ಎಂದು ಹಿರಿಯೂರು ಸಹಕಾರ ಅಭಿವೃದ್ಧಿ ಅಧಿಕಾರಿ ಹಾಗೂ ಸಮಾಪನಾಧಿಕಾರಿ ತಿಳಿಸಿದ್ದಾರೆ.

