ಕೈಗಾರಿಕಾ ಗ್ಯಾಸ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
Praxair India:
ಕೈಗಾರಿಕಾ ಗ್ಯಾಸ್ ವಲಯದಲ್ಲಿ ರೂ. 210 ಕೋಟಿ ಹೂಡಿಕೆ ಒಪ್ಪಂದಕ್ಕೆ ಅಂಕಿತ! ಹಾಕಲಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

Praxair India Pvt. Ltd. (Linde plc Group) ಸಂಸ್ಥೆಯ ಜೇಮ್ಸ್ ಫೋಸ್ಟರ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದೆವು. ಸಂಸ್ಥೆ ಕರ್ನಾಟಕದಲ್ಲಿ ಕೈಗಾರಿಕಾ ಗ್ಯಾಸ್ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಲು ಕೈಗೊಂಡಿರುವ ಮಹತ್ವದ ಯೋಜನೆ ಬಗ್ಗೆ ಚರ್ಚಿಸಿದೆವು.

- Advertisement - 

ದ್ರವ ಆಮ್ಲಜನಕ & ಸಾರಜನಕ ಉತ್ಪಾದನಾ ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುವ ಉದ್ದೇಶದಿಂದ, 202526ರಿಂದ ಮುಂದಿನ ಮೂರು ವರ್ಷಗಳಲ್ಲಿ ₹210 ಕೋಟಿ ಹೂಡಿಕೆ ಮಾಡಲು ಯೋಜಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಕರ್ನಾಟಕ ಸರ್ಕಾರ ಮತ್ತು Praxair India ನಡುವೆ  MoUಗೆ ಸಹಿ ಮಾಡಲಾಗಿದೆ. ಯೋಜನೆಯನ್ನು ತ್ವರಿತಗೊಳಿಸಲು ಅಗತ್ಯವಾದ ಭೂಮಿ ಗುರುತಿಸುವಿಕೆ, ಸೌಲಭ್ಯಗಳ ಒದಗಿಸುವಿಕೆ ಮತ್ತು ಏಕ-ಗವಾಕ್ಷಿ ಅನುಮತಿಗಳು ಸೇರಿದಂತೆ ಸರ್ಕಾರದ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದೇವೆ.

- Advertisement - 

ಈ ಹೂಡಿಕೆ ರಾಜ್ಯದ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನು ಮತ್ತಷ್ಟು ಉತ್ತೇಜಿಸಲಿದೆ ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.

 

 

 

Share This Article
error: Content is protected !!
";