ನಟ ಅಲ್ಲು ಅರ್ಜುನ್ ಅವರಿಗೆ 14 ದಿನ ನ್ಯಾಯಾಂಗ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಹೈದರಾಬಾದ್:
ಹೈದರಾಬಾದ್‌ನ ಸಂಧ್ಯಾ ಸಿನಿಮಾ ಥಿಯೇಟರ್‌ನ ಹೊರಭಾಗ ಪುಷ್ಪ
2: ದಿ ರೂಲ್ ಪ್ರೀಮಿಯರ್​ ಶೋ ಸಂದರ್ಭದಲ್ಲಿ ಭಾರೀ ಕಾಲ್ತುಲಿತ ಉಂಟಾಗಿ ಓರ್ವ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಕ ನಟ ಅಲ್ಲು ಅರ್ಜುನ್ ಅವರನ್ನು ಶುಕ್ರವಾರ ಹೈದರಾಬಾದ್‌ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿಸಲಾಗಿತ್ತು.

 ಇಲ್ಲಿನ ನಾಂಪಲ್ಲಿ ಕೋರ್ಟ್‌14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಪೊಲೀಸರು ನಟನನ್ನು ಚಂಚಲಗುಡ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ. ಈ ಮೂಲಕ ಅಲ್ಲೂ ಅರ್ಜುನ್‌ಡಿ.27ರ ತನಕ ಜೈಲುವಾಸ ಅನುಭವಿಸಬೇಕಿದೆ.

ಏನಿದು ಪ್ರಕರಣ:
ಕಳೆದ ಡಿಸೆಂಬರ್
5ರಂದು ಪುಷ್ಪ-2 ಸೀಕ್ವೆಲ್​​ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಡಿಸೆಂಬರ್ 4ರ ರಾತ್ರಿ ಪ್ರೀ ರಿಲೀಸ್​​​ ಶೋಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂದು ನಾಯಕ ನಟ ಅಲ್ಲು ಅರ್ಜುನ್ ಆಗಮಿಸಿದ ಹಿನ್ನೆಲೆಯಲ್ಲಿ ಭಾರೀ ಜನಸಂದಣಿ ಉಂಟಾಗಿತ್ತು.

ಸಂಧ್ಯಾ ಥಿಯೇಟರ್‌ನ ಹೊರಗೆ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದರು. ಅಷ್ಟೇ ಅಲ್ಲದೇ, ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

 

- Advertisement -  - Advertisement - 
Share This Article
error: Content is protected !!
";