ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಲನಚಿತ್ರ ನಾಯಕ ನಟ ಡಾಲಿ ಧನಂಜಯ ಭಾನುವಾರ ಚಿತ್ರದುರ್ಗ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಆಗಮಿಸಿ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ರವರ ದರ್ಶನಾಶೀರ್ವಾದ ಪಡೆದು, ತಮ್ಮ ವಿವಾಹ ಮಹೋತ್ಸವಕ್ಕೆ ಆಮಂತ್ರಣಗೈದರು.
ಈ ಸಂದರ್ಭದಲ್ಲಿ ಸ್ವಾಮೀಜಿಗಳು ನಟ ಡಾಲಿ ಧನಂಜಯ ಅವರನ್ನು ಗೌರವಿಸಿ ಸನ್ಮಾನಿಸಿದರು.