ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕರ್ನಾಟಕದ ಹೆಸರಾಂತ ಲೇಖಕ, ಸಾಹಿತಿ, ರಂಗಕರ್ಮಿ, ಹಿರಿಯ ಪತ್ರಕರ್ತ ಗಣೇಶ ಅಮೀನಗಡ ಅವರನ್ನು ವಿಜಯಪುರದ ನಟ, ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಇತ್ತಿಚೆಗೆ ಆತ್ಮೀಯವಾಗಿ ಭೇಟಿಯಾದರು.
ಈ ವೇಳೆ ಗಣೇಶ ಅಮೀನಗಡ ತಮ್ಮ ಬರವಣಿಗೆಯಲ್ಲಿ ರಚಿಸಿರುವ ರಂಗ ಬಾನಾಡಿ, ಆಲ್ ರೈಟ್ ಮಂತ್ರ ಮಾಂಗಲ್ಯ, ತುಸುವೆ ಕುಡಿವ ಗಂಡನ್ನ ಕೊಡು ತಾಯಿ, ಹಾಗೂ ಸಚಿವ ಎಮ್ ಬಿ ಪಾಟೀಲ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಅವರ“ಮುಖ ಪುಸ್ತಕದ ಮರೆಯದ ಮುಖಗಳು” ಲೇಖನಗಳಸಂಕಲನ ಪುಸ್ತಕಗಳು ವಿಶ್ವಪ್ರಕಾಶ ಅವರಿಗೆ ಕೊಡುಗೆಯಾಗಿ ನೀಡಿದರು.
ಈ ವೇಳೆ ಸಿಂದಗಿ ಶರಣ ಸಾಹಿತ್ಯ ಪರಿಷತ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಮಹಾಂತೇಶ ನೂಲಾನವರ, ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಗುಮ್ಮಟ ನಗರಿ ವರದಿಗಾರ ಇಸ್ಮಾಯಿಲ್ ಶೇಖ ಇದ್ದರು.