ಭೋವಿ ಸಮಾಜಕ್ಕೆ ಅವಮಾನ ಮಾಡಿದ ನಟ ಹುಲಿ ಕಾರ್ತಿಕ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಖಾಸಗಿ ವಾಹಿನಿ ಒಂದರ ಕಾರ್ಯಕ್ರಮದಲ್ಲಿ ಭೋವಿ ಜನಾಂಗಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಹಾಸ್ಯ ನಟ ಹುಲಿ ಕಾರ್ತಿಕ್‌ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ.

ಸಾರ್ವಜನಿಕ ವಲಯದಲ್ಲಿದ್ದಾಗ ಪದ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ನಿಷೇಧಿತ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ನಟ ಹುಲಿ ಕಾರ್ತಿಕ್‌ವಿರುದ್ಧ ದೂರು ದಾಖಲಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಆದರೂ ಆತನ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಒಂದು ಸಮುದಾಯಕ್ಕೆ ಅವಮಾನವಾಗುತ್ತದೆ ಎಂಬ ಕಾರಣಕ್ಕೆ ಈ ಹಿಂದೆ ಬಳಕೆಯಾಗುತ್ತಿದ್ದ ಕೆಲ ಶಬ್ಧಗಳನ್ನು ಕಾನೂನು ನಿಷೇಧ ಮಾಡಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಆ ಪದ ಬಳಕೆ ಮಾಡುವುದು ನಿಷೇಧವಾಗಿದೆ. ಸದ್ಯ ಸ್ಯಾಂಡಲ್‌ವುಡ್‌ನ ನಟ ಹಾಗೂ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಕಾರ್ತಿಕ್ ಅಲಿಯಾಸ್‌ಹುಲಿ ಕಾರ್ತಿಕ್‌ನಿಷೇಧಿತ ಪದ ಬಳಕೆ ಮಾಡಿದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ.

ಹಿಂದೊಮ್ಮೆ ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ಕೂಡ ನಿಷೇಧಿತ ಪದ ಬಳಕೆ ಮಾಡಿದ್ದು ಅವರ ವಿರುದ್ಧ ದೂರು ದಾಖಲಾಗಿತ್ತು. ನಂತರ ಅದಕ್ಕೆ ಆಕೆ ಸ್ಪಷ್ಟನೆ ಕೂಡ ನೀಡಿದ್ದರು. ಆಕೆ ಮಾತನಾಡಿದ್ದ ಕ್ಲಿಪ್ಪಿಂಗ್‌ಗಳನ್ನು ಎಫ್ ಎಸ್ ಎಲ್ ಗೂ ಕಳಿಸಲಾಗಿತ್ತು.

ನಟ ಹುಲಿ ಕಾರ್ತಿಕ್ ಕಳೆದ ತಿಂಗಳು ಖಾಸಗಿ ಚಾನಲ್‌ನಲ್ಲಿ ಪ್ರಸಾರವಾಗಿದ್ದ ಅನುಬಂಧ ಅವಾರ್ಡ್ ಎಂಬ ಕಾರ್ಯಕ್ರಮದಲ್ಲಿ ಭೋವಿ ಜನಾಂಗಕ್ಕೆ ಅವಮಾನ ಮಾಡುವ ರೀತಿಯಲ್ಲಿ ಪದ ಬಳಕೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಜತೆಗೆ ಜನಾಂಗವನ್ನು ತುಚ್ಛವಾಗಿ ಕಾಣಲಾಗಿದೆ ಎಂದು, ಲೋಕೇಶ್ ಎಂಬುವವರು ದೂರು ನೀಡಿದ್ದರು. ಹೀಗೆ ಒಂದು ಜನಾಂಗವನ್ನು ಗುರಿಯಾಗಿಸಿಕೊಂಡು ಉದ್ದೇಶಪೂರ್ವಕವಾಗಿ ನಿಷೇಧಿತ ಪದ ಬಳಕೆ ಮಾಡಿದ್ದರಿಂದಾಗಿ ದೂರು ನೀಡಲಾಗಿದೆ ಎಂದು ಲೊಕೇಶ್ ತಿಳಿಸಿದ್ದಾರೆ.

ಇಲ್ಲಿ ಕಾರ್ತಿಕ್ ಮಾತ್ರವಲ್ಲದೆ ಸ್ಕ್ರಿಪ್ಟ್ ರೈಟರ್ , ಕಾರ್ಯಕ್ರಮ ಆಯೋಜಕ‌, ನಿರ್ಮಾಪಕ , ನಿರ್ದೇಶಕ ವಿರುದ್ಧ ಕೂಡ ದೂರು ದಾಖಲಾಗಿದೆ.

ನಟ ಕಾರ್ತಿಕ್ ಈಗಾಗಲೇ ಈ ಪ್ರಕರಣಕ್ಕೆ ಸ್ಪಷ್ಟನೆ ನೀಡಿದ್ದು ನಾನು ಹೊಂಡ ಅಂದಿದ್ದೇ ಹೊರತು ಜನಾಂಗಕ್ಕೆ ನೋವಾಗುವ ಶಬ್ಧ ಬಳಕೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಸದ್ಯ ಈ ವಿಡಿಯೋ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ಸ್ಥಳ ಮಹಜರನ್ನು ಮುಗಿಸಿದ್ದಾರೆ. ಇನ್ನು ಕಾರ್ತಿಕ್ ಮೇಲೆ ಅಟ್ರಾಸಿಟಿ ಕೇಸ್ ದಾಖಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -  - Advertisement -  - Advertisement - 
Share This Article
error: Content is protected !!
";