ನಟ ಕಮಲ್ ಹಾಸನ್ ಅಭಿನಯದ “ಥಗ್ ಲೈಫ್” ಚಿತ್ರ ನಿಷೇಧಿಸಿ 

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿರುವ ನಟ  ಕಮಲ್ ಹಾಸನ್
ಅಭಿನಯದ ಥಗ್ ಲೈಫ್ಚಿತ್ರಕ್ಕೆ  ರಾಜ್ಯ ಸರ್ಕಾರ ಕರ್ನಾಟಕದಲ್ಲಿ ನಿಷೇಧ ಹೇರಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

- Advertisement - 

ಕನ್ನಡ ಭಾಷೆ ಉಗಮದ ಬಗ್ಗೆ ಬಾಲಿಶಾ ಹಾಗೂ ಉದ್ಧಟತನದ ಹೇಳಿಕೆ ನೀಡಿರುವ ಭಾಷೆಗೇಡಿಯ ಚಿತ್ರ ಜೂನ್ 5ರಂದು ರಾಜ್ಯದಲ್ಲಿ ಬಿಡಗಡೆಗೆ ಸಿದ್ಧವಾಗಿದೆ.

- Advertisement - 

ಈ ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡದೆ ಕಮಲ್ ಹಾಸನ್ಗೆ ಬುದ್ಧಿ ಕಲಿಸಬೇಕು. ಕನ್ನಡ ನಾಡು, ಕನ್ನಡ ನುಡಿ  ವಿರುದ್ಧವಾಗಿ ಮಾತನಾಡುವವರಿಗೆ ನಾವು ಕನ್ನಡ ಭಾಷೆಯ ಪರವಾಗಿದ್ದೇವೆ ಎಂಬ ಎಚ್ಚರಿಕೆಯನ್ನು ರಾಜ್ಯ ಸರ್ಕಾರ ತಲುಪಿಸಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ. 

ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ನಾವು ಕನ್ನಡಿಗರು ಮತ್ತು ಕನ್ನಡದ ಪರವಾಗಿದ್ದೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಅದನ್ನು ಕೃತಿಯಲ್ಲೂ ಮಾಡಿ ತೋರಿಸಬೇಕು ಎಂದು ಜೆಡಿಎಸ್ ಆಗ್ರಹ ಮಾಡಿದೆ.

- Advertisement - 

ಕನ್ನಡಿಗರು ಸಹಿಷ್ಣುಗಳು. ಅದರೆ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನ ಕೆಣಕಿದರೆ ಸಹಿಸುವುದಿಲ್ಲ. ಕನ್ನಡದ ವಿರುದ್ಧ ಲಘುವಾಗಿ ಮಾತನಾಡುವವರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು‌ ಎಂದು ಜೆಡಿಎಸ್ ಪಕ್ಷವು ಸರ್ಕಾರವನ್ನು ಆಗ್ರಹಿಸಿದೆ.

 

Share This Article
error: Content is protected !!
";