ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮ್ಮ ತಂದೆ ಪ್ರಕಾಶ್ ಪಡುಕೋಣೆ ಅವರ ಜನ್ಮದಿನದಂದು (ಜೂನ್ 10) ದೀಪಿಕಾ ಪಡುಕೋಣೆ ಅವರು ‘ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ’ಯನ್ನು ಆರಂಭಿಸುವ ಮೂಲಕ ತಂದೆಗೆ ಗಿಫ್ಟ್ ನೀಡಿದ್ದಾರೆ.
ದೇಶಾದ್ಯಂತ 75 ಕೇಂದ್ರಗಳನ್ನು ಹೊಂದಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯುವ ಯೋಜನೆಯಿದೆ ಎನ್ನಲಾಗಿದೆ.
ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು ನಟನೆಯ ಜೊತೆಗೆ ಬ್ಯಾಡ್ಮಿಂಟನ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ತಂದೆ ಪ್ರಕಾಶ್ ಪಡುಕೋಣೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ. ತಂದೆ ಪ್ರಕಾಶ್ ಪಡುಕೋಣೆಯ ಜನ್ಮದಿನದ ವಿಶೇಷ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಅವರು ಹೊಸ ಬ್ಯಾಡ್ಮಿಂಟನ್ ಸ್ಕೂಲ್ ಲಾಂಚ್ ಮಾಡುವ ಮೂಲಕ ತಂದೆಗೆ ವಿಶೇಷ ಗಿಫ್ಟ್ ಕೊಟ್ಟಿದ್ದಾರೆ.
ದೀಪಿಕಾ ಅವರು ‘ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ ಹೊಸ ಕೇಂದ್ರವನ್ನು ಮಂಗಳವಾರ ಆರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ದೀಪಿಕಾ ಅವರು ಮಾಹಿತಿ ನೀಡಿದ್ದಾರೆ.
ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವಳು ನಾನು. ಈ ಕ್ರೀಡೆ ಒಬ್ಬರ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸುತ್ತದೆ ಎಂಬುದು ನನಗೆ ಗೊತ್ತು. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಮೂಲಕ ನಾವು ಬ್ಯಾಡ್ಮಿಂಟನ್ ಆಟದ ಸಂತೋಷ ಮತ್ತು ಶಿಸ್ತನ್ನು ಎಲ್ಲಾ ಜನರಿಗೆ ತಲುಪಿಸಲು ಬಯಸಿದ್ದೇವೆ ಎಂದು ಅವರು ಮಾಹಿತಿಯನ್ನ ಶೇರ್ ಮಾಡಿದ್ದಾರೆ.
70 ವರ್ಷ ವಯಸ್ಸಿನಲ್ಲೂ ಬ್ಯಾಡ್ಮಿಂಟನ್ ಬಗ್ಗೆ ನಿಮ್ಮ ಉತ್ಸಾಹ ನನಸಾಗಿಸಲು ನಾವು ಬದ್ಧರಾಗಿದ್ದೇವೆ. ಎಲ್ಲರಿಗೂ ಬ್ಯಾಡ್ಮಿಂಟನ್ ಎಂದು ಬರ್ತ್ಡೇ ಪೋಸ್ಟ್ನಲ್ಲಿ ದೀಪಿಕಾ ತಿಳಿಸಿದ್ದಾರೆ.
ದೀಪಿಕಾ ಪಡುಕೋಣೆ ಹಾಕಿರುವ ಪೋಸ್ಟ್ ಗೆ ರಣವೀರ್ ಸಿಂಗ್ ಅವರು ಹಾರ್ಟ್ ಎಮೋಜಿಯನ್ನು ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ ಬೆಂಗಳೂರು, ಮೈಸೂರು, ಮುಂಬೈ, ಚೆನ್ನೈ ಸೇರಿದಂತೆ ದೇಶದ 18 ನಗರಗಳಲ್ಲಿ ಒಟ್ಟೂ 75 ಕೇಂದ್ರಗಳನ್ನು ಹೊಂದಿದೆ. ಈ ವರ್ಷದ ಕೊನೆಯಲ್ಲಿ 100 ಕೇಂದ್ರ ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಒಟ್ಟೂ 250 ಕೇಂದ್ರವನ್ನು ಆರಂಭಿಸುವ ಉದ್ದೇಶ ದೀಪಿಕಾ ಅವರಿಗೆದೆ ಎನ್ನಲಾಗಿದೆ.