ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿನೆಮಾ ನಾಯಕ ನಟಿ ರಚಿತಾ ರಾಮ್ ಅವರು ತನ್ನ ಮದುವೆ ವಿಚಾರ ಕುರಿತು ಮಾಹಿತಿ ನೀಡಿದ್ದಾರೆ. ಬರ್ತ್ಡೇ ಸಮಯದಲ್ಲೇ ಮಾಹಿತಿ ರಿವೀಲ್ ಮಾಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ತಲೆಯಲ್ಲಿ ಹುಳು ಬಿಟ್ಟುಕೊಂಡಿದ್ದಾರೆ.
ರಚಿತಾ ರಾಮ್ಗೆ ಈಗ 33 ವರ್ಷ. ಅವರು ಇನ್ನೂ ಮದುವೆ ಬಗ್ಗೆ ಚಿಂತಿಸಿಲ್ಲ. ಅವರು ತಮ್ಮ ಪಾಲಿಗೆ ಬಂದ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಈಗ ಅವರು ವಿವಾಹದ ಬಗ್ಗೆ ಗಂಭೀರವಾಗಿ ಯೋಚಿಸಿದಂತೆ ಇದೆ. ಬರ್ತ್ಡೇ ದಿನ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ.
ಇದಕ್ಕೆ ಉತ್ತರಿಸಿದ ಅವರು, ವಿವಾಹ ಆಗಬೇಕು ಅಂತ ನಿರ್ಧರಿಸಿದ್ದೇನೆ. ಆದಷ್ಟು ಬೇಗ ಮದುವೆ ಆಗುತ್ತೇನೆ. ಮನೆಯಲ್ಲಿ ಹುಡುಗನ ಹುಡುಕುತ್ತಾ ಇದ್ದಾರೆ. ನಾನು ಅರೇಂಜ್ ಮ್ಯಾರೇಜ್ ಆಗ್ತೀನಿ ಎಂದು ಹೇಳಿದ್ದಾರೆ.
ರಚಿತಾ ಮದುವೆ ಬಗ್ಗೆ ಕುತೂಹಲ ಮೂಡಿದೆ. ಅವರು ಮದುವೆ ಆಗುವ ಹುಡುಗನನ್ನು ಮನೆಯವರೇ ನಿರ್ಧರಿಸುತ್ತಾರೋ ಅಥವಾ ಇವರೇ ಆಯ್ಕೆ ಮಾಡಿಕೊಳ್ಳುತ್ತಾರೋ ಎನ್ನುವ ಪ್ರಶ್ನೆ ಮೂಡಿದೆ.
ರಚಿತಾ ವಿವಾಹ ಆದರೆ ಅವರು ಇಂಡಸ್ಟ್ರಿ ತೊರೆಯಬಾರದು ಎಂಬುದು ಅಭಿಮಾನಿಗಳ ಕೋರಿಕೆ. ರಚಿತಾ ರಾಮ್ ಅವರಿಗೆ ಈಗ ಪರಭಾಷೆಯಿಂದ ಬೇಡಿಕೆ ಸೃಷ್ಟಿ ಆಗುತ್ತಿದೆ.
ತಮಿಳಿನಿ ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈಗ ಲೋಕೇಶ್ ಕನಗರಾಜ್ ಹೀರೋ ಆಗಿ ನಟಿಸುತ್ತಿರುವ ತಮಿಳು ಸಿನಿಮಾಗೆ ಇವರು ನಾಯುಕಿ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.

